ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಗೂ ಒಂದು ವಾರದ ಮೊದಲು, ಯುಎಸ್ನಾದ್ಯಂತ ಇರುವ ರಾಮಭಕ್ತರು 21 ನಗರಗಳಲ್ಲಿ ಕಾರ್ ರ್ಯಾಲಿಗಳನ್ನು ಆಯೋಜಿಸಿದ್ದಾರೆ. ಅಲ್ಲದೇ ರಾಜಧಾನಿಯಲ್ಲಿ ಭಗವಾನ್ ರಾಮನಿಗೆ ಸಮರ್ಪಿತಗೊಂಡ ಟೆಸ್ಲಾ ಕಾರ್ ಮ್ಯೂಸಿಕಲ್ ಶೋ ಅನ್ನು ಕೂಡ ನಡೆಸಿದ್ದಾರೆ.
ವಾಷಿಂಗ್ಟನ್ DC ಯ ಮೇರಿಲ್ಯಾಂಡ್ ಉಪನಗರವಾದ ಫ್ರೆಡೆರಿಕ್ ಸಿಟಿಯಲ್ಲಿರುವ ಶ್ರೀ ಭಕ್ತ ಆಂಜನೇಯ ದೇವಸ್ಥಾನದಲ್ಲಿ ಶನಿವಾರ ರಾತ್ರಿ 100 ಕ್ಕೂ ಹೆಚ್ಚು ರಾಮ ಭಕ್ತರು ತಮ್ಮ ಟೆಸ್ಲಾ ಕಾರಿನ ಲೈಟ್ ಶೋ ಆಯೋಜನೆ ಮಾಡಿದ್ದಾರೆ. ಈ ವೇಳೆ ಟೆಸ್ಲಾ ಕಾರುಗಳನ್ನು ರಾಮ್ ಎಂದು ಬರುವಂತೆ ನಿಲ್ಲಿಸಿ ಅದರ ಲೈಟ್ಗಳನ್ನು ಆನ್ ಮಾಡಲಾಯಿತು. ಆಗ ಬೆಳಕಲ್ಲಿ ಮೂಡಿದ ಭಗವಾನ್ ರಾಮನ ಹೆಸರು ಭಾರೀ ಗಮನಸೆಳೆದಿದೆ. ಜೈಶ್ರೀರಾಮ ಹಾಡಿಗೆ ತಕ್ಕಂತೆ ಲೈಟ್ ಶೋಗಳನ್ನು ಇವು ನಡೆಸಿವೆ.
2022 ರಲ್ಲಿ ಪರಿಚಯಿಸಲಾದ, ಲೈಟ್-ಫ್ಲಾಶಿಂಗ್-ಸೆಟ್-ಟು-ಮ್ಯೂಸಿಕ್ ವೈಶಿಷ್ಟ್ಯ ಬಳಸಿ ಮ್ಯೂಸಿಕಲ್ ಶೋ ಆಯೋಜಿಸಲಾಗಿದೆ. ಅಮೆರಿಕದ ವಿಶ್ವ ಹಿಂದೂ ಪರಿಷತ್ ಟೆಸ್ಲಾ ಮ್ಯೂಸಿಕ್ ಶೋನ ಸಂಘಟಕರಾಗಿದ್ದು, 200 ಕ್ಕೂ ಹೆಚ್ಚು ಟೆಸ್ಲಾ ಕಾರ್ ಪ್ರಕಾರ ಮಾಲೀಕರು ಈವೆಂಟ್ಗಾಗಿ ನೋಂದಾಯಿಸಿಕೊಂಡಿದ್ದರು ಎಂದಿದೆ.
ಈವೆಂಟ್ ಆಯೋಜಕರು ತೆಗೆದ ಡ್ರೋನ್ ಚಿತ್ರಗಳು “RAM” ಅನ್ನು ರಚಿಸಿರುವುದನ್ನು ಕಾಣಬಹುದು.
“ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಯ ಸಂದರ್ಭದಲ್ಲಿ ಟೆಸ್ಲಾ ರಾಮ್ ಭಗವಾನ್ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಕಳೆದ 500 ವರ್ಷಗಳಿಂದ ಅಯೋಧ್ಯೆಯಲ್ಲಿ ರಾಮ ಮಂದಿರಕ್ಕಾಗಿ ಹೋರಾಟ ನಡೆಸಿದ ಹಿಂದೂಗಳಿಗೆ ನಾವು ಕೃತಜ್ಞರಾಗಿರುತ್ತೇವೆ” ಎಂದು ಇಲ್ಲಿನ ಟೆಸ್ಲಾ ಸಂಗೀತ ಕಾರ್ಯಕ್ರಮದ ಸಂಘಟಕರಾದ ವಿಎಚ್ಪಿ ಅಮೆರಿಕದ ಡಿಸಿ ಘಟಕದ ಅಧ್ಯಕ್ಷ ಮಹೇಂದ್ರ ಸಾಪಾ ಹೇಳಿದ್ದಾರೆ.
#WATCH | Vishwa Hindu Parishad (VHP) of America organised an Epic Tesla Musical Light show in Maryland ahead of the Ram Mandir 'Pran Pratishtha' in Ayodhya on January 22. pic.twitter.com/8vG8WhHMIO
— ANI (@ANI) January 14, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.