ಬೆಂಗಳೂರು: ಮೀಸಲಾತಿಯ ವರ್ಗೀಕರಣ ಸಾಮಾಜಿಕ ನ್ಯಾಯವನ್ನು ಕೊನೆಯ ವ್ಯಕ್ತಿಯಾತ್ತ ಒಯ್ಯುತ್ತದೆ ಎಂದು ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ, ಕೇಂದ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಅರುಣಕುಮಾರ್ ಮಿಶ್ರಾ ಹೇಳಿದರು. ಮೀಸಲಾತಿಯ ಹಂಚಿಕೆಯ ವಿಷಯದಲ್ಲಿ ರಾಜ್ಯಗಳನ್ನು ಹೆಚ್ಚು ಜವಾಬ್ದಾರಿಯುತ ಗೊಳಿಸಬೇಕು . ಈ ನಿಟ್ಟಿನಲ್ಲಿ ಸಂವಿಧಾನದ 341 ವಿಧಿಯನ್ನು ಮರು ವ್ಯಾಖ್ಯಾನಿಸಬೇಕಿದೆ ಎಂದು ನ್ಯಾ ಮಿಶ್ರಾ ಅಭಿಪ್ರಾಯಪಟ್ಟರು.
ಸಮಾಜ ಕಲ್ಯಾಣ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನ ಆಗಬೇಕು; ಅವು ಕೇವಲ ಔಪಚಾರಿಕ ರೀತಿಯಲ್ಲಿ ಅನುಷ್ಠಾನಕ್ಕೆ ಬಂದರೆ ಸಾಲದು ಎಂದು ನ್ಯಾ ಅರುಣ್ ಕುಮಾರ್ ಮಿಶ್ರಾ ಅವರು ಅಭಿಪ್ರಾಯಪಟ್ಟರು.
ಬೆಂಗಳೂರಿನ ಸಿಟಿಜನ್ಸ್ ಫಾರ್ ಸೋಶಿಯಲ್ ಜಸ್ಟಿಸ್ ವತಿಯಿಂದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದಲ್ಲಿ ಏರ್ಪಡಿಸಿದ “ನ್ಯಾಯ ಹಂಚಿಕೆ ಮತ್ತು ವಾಸ್ತವಿಕ ಸಮಾನತೆ” ಕುರಿತಂತೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಧಾನಮಂತ್ರಿ ಆವಾಸ್ ಯೋಜನಾದಂಥ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನಕ್ಕೆ ಗಮನ ಕೊಡಬೇಕು ಎಂದು ಆಶಿಸಿದರು. ಕಡ್ಡಾಯ ಶಿಕ್ಷಣ, ಆಹಾರ, ನೀರಿನ ಸಮಾನ ಹಕ್ಕುಗಳ ಕಡೆಗೆ ಗಮನ ಹರಿಸುವ ಕುರಿತು ಸರ್ಕಾರಗಳು ಹೆಚ್ಚು ಗಮನಕೊಡಬೇಕು.
ಪರಿಶಿಷ್ಟ ಜಾತಿ, ಪಂಗಡದವರನ್ನು ಕಡೆಗಣಿಸಬಾದರು; ಅವರಿಗೆ ಸಮಾನ ಹಕ್ಕು ನೀಡಬೇಕೆಂದು ಅವರು ವಿವಿಧ ತೀರ್ಪುಗಳನ್ನು ಉಲ್ಲೇಖಿಸಿ ತಿಳಿಸಿದರು.
ಜಗತ್ತು ಇವತ್ತು ‘ವಸುದೈವ ಕುಟುಂಬಕಂ’ ಎಂಬ ವಿಶ್ವವೇ ಒಂದು ಜಗತ್ತು ಎಂಬ ಸ್ಥಿತಿಯಲ್ಲಿದೆ. ಉತ್ತಮ ಕೆಲಸದ ವಾತಾವರಣ, ಸಮಾನ ಕೆಲಸಕ್ಕೆ ಸಮಾನ ವೇತನ ಅನುಷ್ಠಾನದ ಕಡೆಗೆ ಗಮನ ಅಗತ್ಯ ಎಂದು ಅವರು ನುಡಿದರು. ಪಾರದರ್ಶಕ ಮತ್ತು ವಿಶ್ವಾಸಾರ್ಹ ಆಡಳಿತ ವ್ಯವಸ್ಥೆಯ ಅನಿವಾರ್ಯತೆಯ ಬಗ್ಗೆ ಅವರು ಒತ್ತಿ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.