ನವದೆಹಲಿ: ಭಯೋತ್ಪಾದಕ ಗುಂಪು ಲಷ್ಕರ್-ಎ-ತೊಯ್ಬಾ (ಎಲ್ಇಟಿ)ದ ಸಹ-ಸಂಸ್ಥಾಪಕ ಮತ್ತು 26/11 ಮುಂಬೈ ದಾಳಿಯ ಮಾಸ್ಟರ್ಮೈಂಡ್ ಹಫೀಜ್ ಸಯೀದ್ನ ಆಪ್ತ ಉಗ್ರ ಹಫೀಜ್ ಅಬ್ದುಲ್ ಸಲಾಮ್ ಭುಟ್ಟವಿ ಬಂಧನದಲ್ಲಿರುವಾಗ ಹೃದಯಾಘಾತದಿಂದ ನಿಧನನಾಗಿದ್ದಾನೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಈ ಮಾಹಿತಿಯನ್ನು ಅಧಿಕೃತವಾಗಿ ದೃಢಪಡಿಸಿದೆ.
ಲಷ್ಕರ್-ಎ-ತೊಯ್ಬಾ ಸಂಘಟನೆಯಲ್ಲಿ ಭುಟ್ಟವಿ ನಿರ್ಣಾಯಕ ಪಾತ್ರ ವಹಿಸಿದ್ದ. ಕನಿಷ್ಠ ಎರಡು ಸಂದರ್ಭಗಳಲ್ಲಿ ಹಫೀಜ್ ಸಯೀದ್ ಬಂಧನದಲ್ಲಿದ್ದಾಗ, ಭುಟ್ಟವಿ ತಾತ್ಕಾಲಿಕ ನಾಯಕನ ಪಾತ್ರವನ್ನು ವಹಿಸಿಕೊಂಡಿದ್ದ. ಉಗ್ರ ಗುಂಪಿನ ದೈನಂದಿನ ಕಾರ್ಯಾಚರಣೆಗಳನ್ನು ನೋಡಿಕೊಳ್ಳುತ್ತಿದ್ದ ಮತ್ತು ಅದರ ಪರವಾಗಿ ಸ್ವಾಯತ್ತವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದ ಎನ್ನಲಾಗಿದೆ.
ನವೆಂಬರ್ 2008 ರ ಮುಂಬೈ ದಾಳಿಯ ನಂತರ ಅವನು ಸಂಗಟನೆಯ ಜವಾಬ್ದಾರಿಯನ್ನು ವಹಿಸಿಕೊಂಡ, ಈ ಅವಧಿಯಲ್ಲಿ ಸಯೀದ್ ಅನ್ನು ಜೂನ್ 2009 ರವರೆಗೆ ಬಂಧಿಸಲಾಯಿತು.
ಭುಟ್ಟವಿ ಸಂಘಟನೆಯ ಮುಖಂಡರಿಗೆ ಮತ್ತು ಸದಸ್ಯರಿಗೆ ಮಾರ್ಗದರ್ಶನ ನೀಡುತ್ತಿದ್ದ, ಅದರ ಕಾರ್ಯಾಚರಣೆಗಳನ್ನು ಅನುಮೋದಿಸುವ ಫತ್ವಾಗಳನ್ನು ನೀಡುತ್ತಿದ್ದ. ಮುಂಬೈ ಭಯೋತ್ಪಾದಕ ದಾಳಿಗೆ ಕಾರ್ಯಕರ್ತರನ್ನು ಸಿದ್ಧಪಡಿಸುವಲ್ಲಿ ಅವನ ಪಾತ್ರ ಮಹತ್ವದ್ದಾಗಿತ್ತು ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.