ಬೆಂಗಳೂರು : ಜಾಗತಿಕವಾಗಿ ಸಂಚಲನ ಮೂಡಿಸಿದ ಪ್ರಧಾನಿ ನರೇಂದ್ರ ಮೋದಿಯವರ ಲಕ್ಷ ದ್ವೀಪ ಭೇಟಿಯು ಬೈಂದೂರು ಕ್ಷೇತ್ರದಲ್ಲಿ ಮಾರ್ದನಿಸಿದೆ. ಲಕ್ಷದ್ವೀಪದ ಪ್ರವಾಸದ ಬಳಿಕ ಪ್ರಧಾನಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತನ್ನ ಫೋಟೋದೊಂದಿಗೆ ಲಕ್ಷದ್ವೀಪದ ಪ್ರಾಕೃತಿಕ ಸೌಂದರ್ಯವನ್ನು ಹೊಗಳಿದ್ದರು. ಪ್ರಧಾನಿ ಒಂದು ಸಣ್ಣ ನಡೆಯು ಮಾಲ್ಡೀವ್ಸ್ ದೇಶದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುವ ಮೂಲಕ ಅಲ್ಲಿನ ಬೀಚ್ ಪ್ರವಾಸೋದ್ಯಮಕ್ಕೆ ಪೆಟ್ಟು ನೀಡಿತ್ತು. ಇದರ ಬೆನ್ನಲ್ಲೇ ದೇಶಿಯ ಪ್ರವಾಸೋದ್ಯಮಕ್ಕೆ ಒತ್ತು ನೀಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಯಾಯಿತು. ಇದಕ್ಕೆ ದೇಶದ ಖ್ಯಾತನಾಮರು ʼಎಕ್ಸ್ʼ ಮಾಡುವ ಮೂಲಕ ತಮ್ಮ ಬೆಂಬಲ ವ್ಯಕ್ತಪಡಿಸಿದ್ದರು.
Whether it be the beautiful beaches of Udupi , Paradise Beach in Pondi, Neil and Havelock in Andaman, and many other beautiful beaches throughout our country, there are so many unexplored places in Bharat which have so much potential with some infrastructure support. Bharat is… pic.twitter.com/w8EheuIEUD
— Virender Sehwag (@virendersehwag) January 7, 2024
ಖ್ಯಾತ ಕ್ರಿಕೆಟ್ ಆಟಗಾರ ವೀರೇಂದ್ರ ಸೆಹವಾಗ್ ಅವರು ಉಡುಪಿ ಜಿಲ್ಲೆಯ ತ್ರಾಸಿ ಬೀಚ್ ಫೋಟೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು ಭಾರತೀಯ ಬೀಚ್ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವಂತೆ ಕರೆ ನೀಡಿದ್ದರು. ಇದನ್ನು ಗಮನಿಸಿದ ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಅವರು ಕ್ಷೇತ್ರದ ವಿಶ್ವವಿಖ್ಯಾತ ತ್ರಾಸಿ ಮರವಂತೆ ಕಡಲ ತೀರಕ್ಕೆ ಸೆಹ್ವಾಗ್ ಅವರಿಗೆ ಸ್ವಾಗತ ಎಂದು ತಮ್ಮ X ಖಾತೆಯಲ್ಲಿ #WelcomeSehwag ಟ್ಯಾಗ್ ಮೂಲಕ ಸ್ವಾಗತಿಸಿದ್ದರು.
Thank you @virendersehwag sir for highlighting the marvelous #Maravanthe in #Byndoor #Kundapura in #Udupi.
Please visit our places and enjoy the culture of #CoastalKarnataka, #Temples, #Ghats across #Udupi. Together we make it a destination for the whole world.
We welcome you!… pic.twitter.com/urVmGWNgeL
— Gururaj Gantihole (@gantihole) January 8, 2024
ಇದೀಗ ಈ ಅಭಿಯಾನಕ್ಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಡಿಕಲ್ ಸರ್ಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲೆ ಕಳುಹಿತ್ಲು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಾರಾಪತಿ ಮತ್ತು ಕಡಲತಡಿಗೆ ಹೊಂದಿಕೊಂಡ ಹಲವಾರು ಸರಕಾರಿ ಶಾಲೆಯ ವಿದ್ಯಾರ್ಥಿಗಳು ಸಾಥ್ ನೀಡಿದ್ದು, ತಾವೇ ತಯಾರಿಸಿದ ಪ್ಲೇ ಕಾರ್ಡ್ಸ್ ಪ್ರದರ್ಶಿಸುವ ಮೂಲಕ ವಿರೇಂದ್ರ ಸೆಹವಾಗ್ ಅವರನ್ನು ಬೈಂದೂರಿಗೆ ಕೈಬೀಸಿ ಕರೆಯುತ್ತಿದ್ದಾರೆ. ಮಕ್ಕಳ ಕೈಯಲ್ಲಿ ಮಾಲ್ಡೀವ್ಸ್ ಯಾಕೆ? ತ್ರಾಸಿ ಮರವಂತೆ ಓಕೆ, Viru Paaji We Welcome You, ಕೊಡಚಾದ್ರಿಯ ಚಾರಣ ಮರವಂತೆಯ ಬೀಚ್ ವಾಕ್ ಪಡುವರಿಯ ಸಮುದ್ರ ಸ್ನಾನ Lets Explore Byndoor ಎಂದೆಲ್ಲ ಬರೆದಿರುವ ಕಾರ್ಡುಗಳ ಜೊತೆಗೆ ಉತ್ಸಾಹದ ಧ್ವನಿಯೊಂದಿಗೆ ಘೋಷಣೆ ಕೂಗುತ್ತಾ ಸರ್ಕಾರಿ ಶಾಲಾ ಮಕ್ಕಳು ಬೈಂದೂರಿನ ಪ್ರವಾಸಿ ತಾಣಗಳ ಸೊಬಗನ್ನು ಆಸ್ವಾದಿಸಿ ಎಂದು ಮನವಿ ಮಾಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.