ಬೆಂಗಳೂರು: ಭಾರತ ದೇಶದಲ್ಲಿ ಇಲ್ಲಿನವರೆಗೆ ಜಾತ್ಯತೀತತೆಯ ಮುಖವಾಡ ಹಾಕಿದ್ದ ಕಾಂಗ್ರೆಸ್ ಬಣ್ಣ ಬಯಲಾಗಿದೆ ಎಂದು ರಾಜ್ಯ ವಿಧಾನಪರಿಷತ್ತಿನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ವಿಶ್ಲೇಷಿಸಿದರು.
ನಗರದ ಹೋಟೆಲ್ ರಮಾಡದಲ್ಲಿ ಬಿಜೆಪಿ ಲೋಕಸಭಾ ಚುನಾವಣೆ 2024ರ ಸಿದ್ಧತಾ ಸಭೆಯನ್ನು ಏರ್ಪಡಿಸಲಾಗಿದೆ. ಈ ಸಂದರ್ಭದಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಇಲ್ಲಿನವರೆಗೂ ಕಾಂಗ್ರೆಸ್ಸಿಗರು ತಾವು ಜಾತ್ಯತೀತರು, ಜಾತ್ಯತೀತರು ಎನ್ನುತ್ತಿದ್ದರು. ಶ್ರೀರಾಮಮಂದಿರದ ಆಹ್ವಾನಪತ್ರ ತಿರಸ್ಕರಿಸುವ ಮೂಲಕ ಅದು ಮತೀಯವಾದ ರಾಜಕೀಯ ಪಕ್ಷ ಎಂಬುದಕ್ಕೆ ಸ್ಪಷ್ಟ ನಿದರ್ಶನ ಲಭಿಸಿದೆ ಎಂದರು.
ಶ್ರೀರಾಮಮಂದಿರವನ್ನು ಸುಪ್ರೀಂ ಕೋರ್ಟಿನ ತೀರ್ಪಿನಡಿ ನಿರ್ಮಿಸಲಾಗಿದೆ. ಭಕ್ತಾದಿಗಳೇ ದೇಣಿಗೆ ಹಾಕಿ ನಿರ್ಮಾಣ ಕಾರ್ಯ ನಡೆದಿದೆ. ಇದೊಂದು ಅದ್ಭುತ ದೇವಸ್ಥಾನ. ಈ ಐತಿಹಾಸಿಕ ವಿಚಾರದಲ್ಲಿ ಶ್ರೀರಾಮ ಮಂದಿರಕ್ಕೆ ಬಂದು ಭಾಗವಹಿಸುವುದನ್ನು ಬಿಟ್ಟು ಅದನ್ನು ಬಹಿಷ್ಕರಿಸುವುದಾಗಿ ಕಾಂಗ್ರೆಸ್ ಹೇಳಿದೆ. ಕಾಂಗ್ರೆಸ್ಸಿನವರು ರಾಮನೇ ಕಾಲ್ಪನಿಕ ಎಂದು ಕೋರ್ಟಿಗೆ ಅಫಿಡವಿಟ್ ಸಲ್ಲಿಸಿದ್ದರು. ನಂತರ ರಾಮಮಂದಿರದ ಶಿಲಾನ್ಯಾಸದ ಸಂದರ್ಭದಲ್ಲಿ ಕಪ್ಪು ಬಟ್ಟೆ ಧರಿಸಿ ಬಂದರು. ಅವೆಲ್ಲವನ್ನೂ ಮರೆತು ಹಿಂದೂಗಳು ಅವರ ಬಗ್ಗೆ ಸಹಾನುಭೂತಿಯಿಂದ ಇದ್ದರೆ ಇವತ್ತು ಶ್ರೀರಾಮಮಂದಿರದ ಉದ್ಘಾಟನಾ ಸಮಾರಂಭ ಬಹಿಷ್ಕರಿಸಿದ್ದರಿಂದ ಕಾಂಗ್ರೆಸ್ ಪಕ್ಷ ಒಂದು ಮತಕ್ಕೆ ಸೀಮಿತ ಎಂದು ಜಗಜ್ಜಾಹೀರಾಗಿದೆ ಎಂದರು.
ಕಾಂಗ್ರೆಸ್ ನಿಲುವು ಅತ್ಯಂತ ಖಂಡನೀಯ. ಇದರ ಫಲಿತಾಂಶವನ್ನು ಮತ್ತು ಫಲವನ್ನು ಕಾಂಗ್ರೆಸ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಉಣ್ಣಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಮಮಂದಿರ ವಿಷಯದಲ್ಲಿ ಸಿದ್ದರಾಮಯ್ಯರು ಹೊರತುಪಡಿಸಿ ಬೇರೆಲ್ಲರೂ ಒಟ್ಟಾಗಿದ್ದಾರೆ. ಅವರಿಗೆ ಯಾವ ಆತಂಕವೂ ಬೇಡ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.