ಅಯೋಧ್ಯೆ: ಅಯೋಧ್ಯೆಯನ್ನು ಸಂಪೂರ್ಣವಾಗಿ ಸೋಲಾರ್ ನಗರವನ್ನಾಗಿ ಮಾಡುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ದೂರದೃಷ್ಟಿಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಮುಂದಿಡಲಾಗಿದೆ. ಇಲ್ಲಿ ಗುಪ್ತರ್ ಘಾಟ್ನಿಂದ ನಿರ್ಮಲಿ ಕುಂಡ್ವರೆಗೆ 10.2 ಕಿಲೋಮೀಟರ್ ಪ್ರದೇಶದಲ್ಲಿ 470 ಸೋಲಾರ್ ಸ್ಟ್ರೀಟ್ ಲೈಟ್ಗಳೊಂದಿಗೆ ವಿಶ್ವದ ಅತಿದೊಡ್ಡ ಸೋಲಾರ್ ಆಧಾರಿತ ಸ್ಟ್ರೀಟ್ ಲೈನ್ ಅನ್ನು ಅಳವಡಿಸಲಾಗುತ್ತಿದೆ.
ಈ ಮಹತ್ವದ ಕ್ರಮವು ಅಯೋಧ್ಯೆಯಲ್ಲಿ ಗಿನ್ನಿಸ್ ದಾಖಲೆಯ ಪುಟಕ್ಕೆ ಸೇರ್ಪಡೆಗೊಳಿಸಲಿದೆ. ಈಗಾಗಲೇ ದೀಪೋತ್ಸವದ ಸಂದರ್ಭದಲ್ಲಿ ಅತಿಹೆಚ್ಚು ಸಂಖ್ಯೆಯ ದೀಪಗಳನ್ನು ಬೆಳಗಿಸುವ ಮೂಲಕ ಅಯೋಧ್ಯೆ ಗಿನ್ನಿಸ್ ದಾಖಲೆಯ ಪುಟಕ್ಕೆ ಸೇರ್ಪಡೆಗೊಂಡಿದೆ.
ಯೋಗಿ ಅವರ ಮಾರ್ಗದರ್ಶನದಲ್ಲಿ ಈಗಾಗಲೇ ಉತ್ತರಪ್ರದೇಶ ನ್ಯೂ ಆಂಡ್ ರಿನಿವೇಬಲ್ ಎನರ್ಜಿ ಡಿವಲಪ್ಮೆಂಟ್ ಏಜೆನ್ಸಿ ಶೇ. 70 ರಷ್ಟು ಸೌರ ಬೀದಿ ದೀಪಗಳ ಅಳವಡಿಕೆಯನ್ನು ಪೂರ್ಣಗೊಳಿಸಿದೆ. ಉಳಿದ 160 ಸೌರ ಬೀದಿ ದೀಪಗಳನ್ನು ಜನವರಿ 22 ರೊಳಗೆ ಅಳವಡಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.