ನವದೆಹಲಿ: ಭಾರತ ಮತ್ತು ಭಾರತದ ಪ್ರಧಾನಿಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಮಾಲ್ಡೀವ್ಸ್ ಸಚಿವರ ಧೋರಣೆಗೆ ಭಾರತೀಯರು ತಕ್ಕ ಪ್ರತಿಕ್ರಿಯೆಯನ್ನೇ ನೀಡುತ್ತಿದ್ದಾರೆ. ಪ್ರಸ್ತುತ ಸೆಡಿದೆದ್ದಿರುವ ಭಾರತ ಮಾಲ್ಡೀವ್ಸ್ ಪ್ರವಾಸೋದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಎಲ್ಲಾ ಸೂಚನೆಗಳನ್ನು ನೀಡಿದೆ. ಬಾಯ್ಕಾಟ್ ಮಾಲ್ಡೀವ್ಸ್ ಸದಸ್ಯದ ಟ್ರೆಂಡ್ ಆಗಿದೆ. ಇದರ ಪರಿಣಾಮ ಮಾಲ್ಡೀವ್ಸ್ನಲ್ಲಿ ಭಾರೀ ಸಂಖ್ಯೆಯ ಹೋಟೆಲ್ ಬುಕ್ಕಿಂಗ್ ರದ್ದಾಗಿದೆ ಮತ್ತು ವಿಮಾನ ಬುಕ್ಕಿಂಗ್ ಕೂಡ ರದ್ದಾಗಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪ ದ್ವೀಪಸಮೂಹಕ್ಕೆ ಭೇಟಿ ನೀಡಿ ಅದರ ಸೌಂದರ್ಯವನ್ನು ವರ್ಣಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಅವರ ಪೋಸ್ಟ್ನಲ್ಲಿ ಮಾಲ್ಡೀವ್ಸ್ ಬಗ್ಗೆ ಯಾವುದೇ ಉಲ್ಲೇಖಗಳು ಇರಲಿಲ್ಲ. ಆದರೆ ಲಕ್ಷದ್ವೀಪದ ಸೌಂದರ್ಯವನ್ನು ಅವರು ವರ್ಣಿಸಿದ್ದು ಅಲ್ಲಿ ಹೊಸದಾಗಿ ರಚನೆಯಾಗಿರುವ ಚೀನಾ ಏಜೆಂಟ್ ಸರ್ಕಾರಕ್ಕೆ ಯಾಕೋ ತಡೆದುಕೊಳ್ಳಲು ಸಾಧ್ಯವಾಗಿಲ್ಲ. ಅದರ ಮೂವರು ಸಚಿವರು ಮೋದಿ ಮತ್ತು ಭಾರತದ ಬಗ್ಗೆ ಅವಹೇಳನಕಾರಿಯಾಗಿ ಬರೆದು ಟ್ವಿಟ್ ಮಾಡಿದ್ದಾರೆ.
ಭಾರತವು ಮಾಲ್ಡೀವ್ಸ್ ಅನ್ನು ಗುರಿಯಾಗಿಸಿಕೊಂಡಿದೆ ಎಂದು ಮತ್ತು ಬೀಚ್ ಪ್ರವಾಸೋದ್ಯಮದ ವಿಷಯದಲ್ಲಿ ಭಾರತವು ಮಾಲ್ಡೀವ್ಸ್ನೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ ಎಂದೂ ಈ ಸಚಿವರುಗಳು ಬರೆದುಕೊಂಡಿದ್ದಾರೆ. ಅವರ ಈ ಪೋಸ್ಟ್ ಭಾರತೀಯ ನಾಗರಿಕರಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ.
‘BoycottMaldives’ ಎಂಬ ಹ್ಯಾಶ್ಟ್ಯಾಗ್ ಕೂಡ ಭಾರತದಲ್ಲಿ ಟಾಪ್ ಸಾಮಾಜಿಕ ಮಾಧ್ಯಮ ಟ್ರೆಂಡ್ ಆಗಿ ವೇಗವನ್ನು ಪಡೆದುಕೊಂಡಿದೆ. ವರದಿಗಳ ಪ್ರಕಾರ, ಮಾಲ್ಡೀವ್ಸ್ನಲ್ಲಿ ಹೋಟೆಲ್ ಬುಕಿಂಗ್ ಮತ್ತು ಫ್ಲೈಟ್ಗಳನ್ನು ರದ್ದುಗೊಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.