ನವದೆಹಲಿ: ಅರುಣಾಚಲ ಪ್ರದೇಶದ ಮುಕುಟಮಣಿಯಾಗಿರುವ ಅಂಜಾವ್ನಿಂದ ಗುಜರಾತ್ನ ಪಶ್ಚಿಮ ತೀರದಲ್ಲಿರುವ ದೇವಭೂಮಿ ದ್ವಾರಕಾದವರೆಗೆ ಲಡಾಖ್ನ ಹಿಮಾವೃತ ಶಿಖರಗಳಿಂ ಅಂಡಮಾನ್ನ ತೀರದವರೆಗೆ ದೇಶವ್ಯಾಪಿಯಾಗಿ ನಡೆಯುತ್ತಿರುವ ವಿಕಸಿತ್ ಭಾರತ್ ಸಂಕಲ್ಪ ಯಾತ್ರೆ ಪ್ರಾರಂಭವಾದ 50 ದಿನಗಳ ಅಲ್ಪಾವಧಿಯಲ್ಲಿ 10 ಕೋಟಿಗೂ ಹೆಚ್ಚು ಜನರ ಭಾಗವಹಿಸುವಿಕೆಯನ್ನು ಕಂಡಿದೆ.
ನವೆಂಬರ್ 15 ರಂದು ಬುಡಕಟ್ಟು ಜನಾಂಗದ ನಾಯಕ ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನದಂದು, ಪ್ರಧಾನಿ ನರೇಂದ್ರ ಮೋದಿ ಅವರು ಜಾರ್ಖಂಡ್ನ ಖುಂಟಿಯಿಂದ ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸಿದರು, ವಿವಿಧ ಕೇಂದ್ರ ಕಲ್ಯಾಣ ಯೋಜನೆಗಳಿಗೆ ಅರ್ಹರಾಗಿದ್ದರೂ ಇದುವರೆಗೆ ಪ್ರಯೋಜನ ಪಡೆಯದ ನಾಗರಿಕರನ್ನು ತಲುಪುವ ಉದ್ದೇಶಿದೊಂದಿಗೆ ಇದನ್ನು ಆರಂಭಿಸಲಾಯಿತು.
ಕೇವಲ 50 ದಿನಗಳಲ್ಲಿ 10 ಕೋಟಿ ಫಲಾನುಭವಿಗಳನ್ನು ತಲುಪಿದ ಈ ಯಾತ್ರೆ ರಾಷ್ಟ್ರದಾದ್ಯಂತ ಜನರನ್ನು ಒಗ್ಗೂಡಿಸುವ ಅಭಿಯಾನವಾಗಿ ಆಳವಾದ ಪ್ರಭಾವವನ್ನು ಬೀರಿದೆ. ವಿಕಸಿತ ಭಾರತ ಯಾತ್ರೆಯಲ್ಲಿ ಭಾಗವಹಿಸಿದವರ ಸಂಖ್ಯೆಯು ಆಸ್ಟ್ರೇಲಿಯಾ, ಕೆನಡಾ, ಜರ್ಮನಿ, ಫ್ರಾನ್ಸ್, ಇಟಲಿ ಮತ್ತು ದಕ್ಷಿಣ ಆಫ್ರಿಕಾದಂತಹ ಕೆಲವು ಪ್ರಮುಖ ದೇಶಗಳ ಸಂಪೂರ್ಣ ಜನಸಂಖ್ಯೆಗಿಂತ ಹೆಚ್ಚಾಗಿದೆ ಎಂಬುದು ವಿಶೇಷ.
ಯಾತ್ರೆಗೆ ದೊರೆತ ಬೃಹತ್ ಬೆಂಬಲವು ವಿಕಸಿತ್ ಭಾರತವನ್ನು ನಿರ್ಮಿಸಲು ನಾಗರಿಕರ ದೃಢವಾದ ಸಮರ್ಪಣೆಯನ್ನು ತೋರಿಸುತ್ತದೆ ಎಂದು ಸರ್ಕಾರ ಹೇಳಿದೆ. ಯಾತ್ರೆ ಪ್ರಾರಂಭವಾದಾಗಿನಿಂದ, 7.5 ಕೋಟಿಗೂ ಹೆಚ್ಚು ವ್ಯಕ್ತಿಗಳು 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ನಿರ್ಮಿಸಲು ಕೊಡುಗೆ ನೀಡಲು ತಮ್ಮ ಬದ್ಧತೆಯನ್ನು ಪ್ರತಿಜ್ಞೆ ಮಾಡಿದ್ದಾರೆ ಎಂದಿದೆ.
ಯಾತ್ರೆಯ ಸಮಯದಲ್ಲಿ 1.7 ಕೋಟಿಗೂ ಹೆಚ್ಚು ಆಯುಷ್ಮಾನ್ ಕಾರ್ಡ್ಗಳನ್ನು ವಿತರಣೆ ಮಾಡಲಾಗಿದೆ ಮತ್ತು 2.2 ಕೋಟಿಗೂ ಹೆಚ್ಚು ನಾಗರಿಕರನ್ನು ಆರೋಗ್ಯ ಶಿಬಿರಗಳಲ್ಲಿ ಪರೀಕ್ಷಿಸಲಾಗಿದೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.