ಗುವಾಹಟಿ: ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠೆಗೆ ಇನ್ನು ಕೆಲವೇ ದಿನಗಳು ಇವೆ. ಇದಕ್ಕೂ ಮುನ್ನ ದೇಶದ ವಿವಿಧ ಭಾಗಗಳಿಂದ ನಾನಾ ವಸ್ತುಗಳು ಅಲ್ಲಿಗೆ ಬರುತ್ತಿವೆ. ಅಸ್ಸಾಂ ರಾಜ್ಯದ ಕಾಮರೂಪ್ ಜಿಲ್ಲೆಯ ಆಲ್ ಅಸ್ಸಾಂ ದಿವ್ಯಾಂಗ್ ವರ್ಸಟೈಲ್ ಅಸೋಸಿಯೇಶನ್ನ ಸದಸ್ಯರು 7000 ಬಿದಿರನ್ನು ಅಯೋಧ್ಯೆಗೆ ಕಳುಹಿಸಿದ್ದಾರೆ.
ಬೊಕೊ ಬಳಿಯ ಲ್ಯಾಂಪಿ ಪ್ರದೇಶದಿಂದ ಅಯೋಧ್ಯೆಗಾಗಿ ಸಂಗ್ರಹಿಸಲಾದ ಬಿದಿರು ತುಂಡುಗಳನ್ನು ತುಂಬಿದ ಕಂಟೈನರ್ ಟ್ರಕ್ ಅನ್ನು ಗುರುವಾರ ರಾತ್ರಿ ರವಾನಿಸಲಾಗಿದೆ.
ಅಯೋಧ್ಯೆಯ ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ಬಿದಿರನ್ನು ಕಳುಹಿಸಲು ಸಾಧ್ಯವಾಗಿರುವುದು ನಮಗೆ ಹೆಮ್ಮೆಯ ಕ್ಷಣವಾಗಿದೆ ಎಂದು ರಭಾ ಹಸೋಂಗ್ ಸ್ವಾಯತ್ತ ಮಂಡಳಿಯ ಸದಸ್ಯ ಅರ್ಜುನ್ ಚೆಟ್ರಿ ಹೇಳಿದ್ದಾರೆ.
“ನಮಗೆ ಸ್ವಲ್ಪ ಬಿದಿರು ಸಂಗ್ರಹಿಸಲು ಸೂಚಿಸಲಾಯಿತು ಮತ್ತು ನಾವು ಬಿದಿರು ತುಂಡುಗಳನ್ನು ಲ್ಯಾಂಪಿ ಪ್ರದೇಶದಿಂದ ಸಂಗ್ರಹಿಸಿದ್ದೇವೆ. ನಾವು ಈ ಬಿದಿರು ತುಂಡುಗಳನ್ನು ಅಯೋಧ್ಯೆಗೆ ಕಳುಹಿಸುತ್ತೇವೆ ಮತ್ತು ಬಿದಿರು ತುಂಬಿದ ಟ್ರಕ್ 1250 ಕಿ.ಮೀ ಕ್ರಮಿಸಿ ಅಯೋಧ್ಯೆಗೆ ತಲುಪುತ್ತದೆ. ಇದು ನಮಗೆ ಹೆಮ್ಮೆಯ ವಿಷಯವಾಗಿದೆ” ಎಂದು ಚೆಟ್ರಿ ಹೇಳಿದರು.
7,000 ಬಿದಿರಿನ ಕೊಂಬೆಗಳನ್ನು ಅಸ್ಸಾಂ-ಮೇಘಾಲಯ ಗಡಿಯಲ್ಲಿರುವ ಲ್ಯಾಂಪಿ ಪ್ರದೇಶದಿಂದ ಸಂಗ್ರಹಿಸಿ ಗೋಹಲ್ಕೋನಾ ಕಚರಿಪಾರಾದಲ್ಲಿ ಜೋಡಿಸಲಾಗಿದೆ. ಆಲ್ ಅಸ್ಸಾಂ ದಿವ್ಯಾಂಗ ವರ್ಸಟೈಲ್ ಅಸೋಸಿಯೇಷನ್ ರಾಮ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಬಳಸಲು ಈ ಬಿದಿರಿನ ತುಂಡುಗಳನ್ನು ಕೊಡುಗೆಯಾಗಿ ನೀಡಿದೆ.
#Assam: Boko sends 7,000 bamboo pieces to #Ayodhya for Ram Mandir inaugurationhttps://t.co/gyUSdXnwjp
— India Today NE (@IndiaTodayNE) January 4, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.