ಕಠ್ಮಂಡು: ಕಳೆದ ವರ್ಷದ ಭೂಕಂಪದಿಂದ ಪ್ರಭಾವಿತವಾಗಿರುವ ನೇಪಾಳದ ಪಶ್ಚಿಮ ಜಿಲ್ಲೆಯಲ್ಲಿ ಮೂಲಸೌಕರ್ಯಗಳ ಪುನರ್ನಿರ್ಮಾಣಕ್ಕಾಗಿ ಭಾರತವು USD 75 ಮಿಲಿಯನ್ ಆರ್ಥಿಕ ಪ್ಯಾಕೇಜ್ ಅನ್ನು ವಿಸ್ತರಿಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ,
ನೇಪಾಳದಲ್ಲಿ 2015 ರ ಭೂಕಂಪದ ನಂತರ ಕಠ್ಮಂಡುವಿನಲ್ಲಿ ಭಾರತದ ಸಹಾಯದೊಂದಿಗೆ ನಿರ್ಮಾಣಗೊಂಡ ತ್ರಿಭುವನ್ ವಿಶ್ವವಿದ್ಯಾಲಯದ ಕೇಂದ್ರ ಗ್ರಂಥಾಲಯ ಮತ್ತು ಇತರ ಪುನರ್ನಿರ್ಮಾಣ ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದ ವೇಳೆ ಅವರು ಈ ಹೇಳಿಕೆ ನೀಡಿದ್ದಾರೆ.
ಜೈಶಂಕರ್ ಅವರು 2024 ರಲ್ಲಿ ವಿದೇಶಕ್ಕೆ ತಮ್ಮ ಮೊದಲ ಭೇಟಿಯಾಗಿ ಗುರುವಾರ ನೇಪಾಳಕ್ಕೆ ಆಗಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜೈಶಂಕರ್, ಕಳೆದ ವರ್ಷ ನವೆಂಬರ್ನಲ್ಲಿ ನೇಪಾಳದ ಪಶ್ಚಿಮ ಭಾಗಗಳಲ್ಲಿ ಸಂಭವಿಸಿದ ಭೂಕಂಪದಿಂದ ಸಂಭವಿಸಿದ ಸಾವುನೋವುಗಳು ಮತ್ತು ವಿನಾಶದ ಬಗ್ಗೆ ಭಾರತವು ದುಃಖಿತವಾಗಿದೆ ಎಂದು ಹೇಳಿದರು.
“ಈ ಪೀಡಿತ ಜಿಲ್ಲೆಗಳಲ್ಲಿ ಮೂಲಸೌಕರ್ಯಗಳ ಪುನರ್ನಿರ್ಮಾಣಕ್ಕಾಗಿ 75 ಮಿಲಿಯನ್ ಯುಎಸ್ಡಿ ಅಂದರೆ ನೇಪಾಳದ 1,000 ಕೋಟಿ ರೂಪಾಯಿಗಳ ಹಣಕಾಸು ಪ್ಯಾಕೇಜ್ ಅನ್ನು ವಿಸ್ತರಿಸುವ ನಮ್ಮ ನಿರ್ಧಾರದ ಬಗ್ಗೆ ನಾನು ನಿನ್ನೆ ಪ್ರಧಾನ ಮಂತ್ರಿ ಪ್ರಚಂಡ ಅವರಿಗೆ ತಿಳಿಸಿದ್ದೇನೆ” ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.