ನ್ಯೂಯಾರ್ಕ್: ಕಾಶ್ಮೀರ ವಿಷಯವನ್ನು ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಿರುವ ಪಾಕಿಸ್ಥಾನಕ್ಕೆ ತಕ್ಕ ಉತ್ತರ ನೀಡಿರುವ ಭಾರತ, ಕಾಶ್ಮೀರವನ್ನು ಮಿಲಿಟರಿ ಮುಕ್ತಗೊಳಿಸುವುದು ಶಾಂತಿ ಸ್ಥಾಪನೆಗೆ ಉತ್ತರವಲ್ಲ, ಪಾಕಿಸ್ಥಾನವನ್ನು ಭಯೋತ್ಪಾದನೆಯಿಂದ ಮುಕ್ತಗೊಳಿಸುವುದು ಶಾಂತಿ ಸ್ಥಾಪನೆಗೆ ಉತ್ತರ ಎಂದಿದೆ.
ವಿಶ್ವಸಂಸ್ಥೆಯಲ್ಲಿ ಪಾಕಿಸ್ಥಾನ ಪ್ರಧಾನಿ ನವಾಝ್ ಶರೀಫ್ ಅವರು ಕಾಶ್ಮೀರ ವಿಷಯ ಪ್ರಸ್ತಾಪಿಸಿದ ಬೆನ್ನಲ್ಲಿ ಟ್ವೀಟ್ ಮಾಡಿರುವ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕಾಸ್ ಸ್ವರೂಪ್ ಅವರು, ಪಾಕಿಸ್ಥಾನವನ್ನು ಭಯೋತ್ಪಾದನಾ ಮುಕ್ತಗೊಳಿಸುವುದರಿಂದ ಶಾಂತಿ ಸ್ಥಾಪನೆ ಸಾಧ್ಯವೇ ಹೊರತು ಕಾಶ್ಮೀರವನ್ನು ಮಿಲಿಟರಿ ಮುಕ್ತಗೊಳಿಸುವುದರಿಂದ ಅಲ್ಲ ಎಂದಿದ್ದಾರೆ.
ಭಯೋತ್ಪಾದನೆಗೆ ಉತ್ತೇಜನ ನೀಡುವುದರಿಂದ ಅಸ್ಥಿರತೆ ಉದ್ಭವವಾಗುತ್ತದೆ. ನೆರೆಹೊರೆಯವರನ್ನು ತೆಗಳುವುದರಿಂದ ಯಾವುದೇ ಪರಿಹಾರ ದೊರೆಯಲಾರದು ಎಂದು ಭಾರತ ಪಾಕಿಸ್ಥಾನಕ್ಕೆ ಸ್ಪಷ್ಟ ಸಂದೇಶ ರವಾನಿಸಿದೆ.
ಪಾಕಿಸ್ಥಾನ ಭಯೋತ್ಪಾದನೆಯ ಮೊದಲ ಬಲಿ ಎಂದಿರುವ ನವಾಝ್ಗೆ ತಿರುಗೇಟು ನೀಡಿರುವ ಸ್ವರೂಪ್, ಪಾಕಿಸ್ಥಾನ ಭಯೋತ್ಪಾದನೆಯ ಬಲಿಯಲ್ಲ, ಅದು ತನ್ನ ಸ್ವಂತ ನೀತಿ ನಿಯಮಗಳಿಗೇ ಬಲಿಯಾಗಿದೆ ಎಂದಿದ್ದಾರೆ.
ಪ್ಯಾಲೇಸ್ತೇನ್ ಮತ್ತು ಕಾಶ್ಮೀರ ವಿದೇಶ ಆಕ್ರಮಣಕಾರರಿಂದ ತುಳಿತಕ್ಕೊಳಗಾಗುತ್ತಿದೆ ಎಂಬ ನವಾಝ್ ಮಾತಿಗೆ ಉತ್ತರಿಸಿರುವ ಅವರು, ನವಾಝ್ ಅವರು ವಿದೇಶಿ ಆಕ್ರಮಣವನ್ನು ಸರಿಯಾಗಿಯೇ ಹೇಳಿದ್ದಾರೆ ಆದರೆ ಆಕ್ರಮಣಕಾರರ ಬಗ್ಗೆ ತಪ್ಪಾಗಿ ತಿಳಿಸಿದ್ದಾರೆ. ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಿಂದ ಮೊದಲು ಜಾಗ ಖಾಲಿ ಮಾಡಿ ಎಂದು ನಾವು ನಿಮಗೆ ಹೇಳುತ್ತೇವೆ ಎಂದಿದ್ದಾರೆ.
ಕಾಶ್ಮೀರ ವಿಷಯ ಪ್ರಸ್ತಾಪಿಸುವುದಕ್ಕೆ ಪದೇ ಪದೇ ವಿಶ್ವಸಂಸ್ಥೆಯ ವೇದಿಕೆಯನ್ನು ಬಳಸಿಕೊಳ್ಳುತ್ತಿರುವ ಪಾಕ್ಗೆ ಭಾರತ ತಕ್ಕ ಪ್ರತಿಕ್ರಿಯೆಯನ್ನೇ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.