ನವದೆಹಲಿ: ಐಸಿಯು ದಾಖಲಾತಿಗಳ ಕುರಿತು ಆಸ್ಪತ್ರೆಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯವು ಮಾರ್ಗಸೂಚಿಗಳನ್ನು ಹೊರಡಿಸಿದ್ದು, ತೀವ್ರ ಅಸ್ವಸ್ಥ ರೋಗಿಗಳನ್ನು ಅವರು ಮತ್ತು ಅವರ ಸಂಬಂಧಿಕರು ನಿರಾಕರಿಸಿದರೆ ತೀವ್ರ ನಿಗಾ ಘಟಕದಲ್ಲಿ ದಾಖಲಿಸುವಂತಿಲ್ಲ ಎಂದು ನಿರ್ದೇಶಿಸಿದೆ.
ಅಂಗಾಂಗ ವೈಫಲ್ಯ ಮತ್ತು ಅಂಗಗಳ ಬೆಂಬಲದ ಅಗತ್ಯವಿದ್ದ ಪಕ್ಷದಲ್ಲಿ ಅಥವಾ ದೇಹ ಸ್ಥಿತಿ ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಮಾತ್ರ ರೋಗಿಯನ್ನು ಐಸಿಯು ದಾಖಲಿಸಿಕೊಳ್ಳಬೇಕು ಎಂದು ಐಸಿಯು ಪ್ರವೇಶ ಮತ್ತು ಡಿಸ್ಚಾರ್ಜ್ ಮಾನದಂಡಗಳ ಮಾರ್ಗಸೂಚಿ ಸ್ಪಷ್ಟಪಡಿಸಿದೆ.
ಐಸಿಯು ಬೆಡ್ಗಾಗಿ ಕಾಯುತ್ತಿರುವ ರೋಗಿಯಲ್ಲಿ ರಕ್ತದೊತ್ತಡ, ನಾಡಿ ಬಡಿತ, ಉಸಿರಾಟದ ಪ್ರಮಾಣ, ಉಸಿರಾಟದ ಮಾದರಿ, ಹೃದಯ ಬಡಿತ, ಆಮ್ಲಜನಕದ ಪ್ರಮಾಣ, ಮೂತ್ರದ ಉತ್ಪಾದನೆ ಮತ್ತು ನರವೈಜ್ಞಾನಿಕ ಸ್ಥಿತಿಯನ್ನು ತಪಾಸಣೆ ನಡೆಸಿ ನಂತರ ಮಾತ್ರ ಐಸಿಯುಗೆ ದಾಖಲಿಸುವ ನಿರ್ಧಾರ ಮಾಡಬೇಕು ಎಂದು ಅದು ಹೇಳಿದೆ.
ಮಾರ್ಗಸೂಚಿಗಳನ್ನು ದುಬೈ ಮತ್ತು ಕೆನಡಾದ ತಜ್ಞರು ಸೇರಿದಂತೆ 24 ಪ್ರಖ್ಯಾತ ವೈದ್ಯರು ಅಭಿವೃದ್ಧಿಪಡಿಸಿದ್ದಾರೆ. ಇವರು ರೋಗಿ ಹೊಂದಿರುವ ಕಾಯಿಲೆಯನ್ನು ಗುಣಪಡಿಸಲು ಚಿಕಿತ್ಸೆಯಿಂದ ಸಾಧ್ಯವಿಲ್ಲ ಎನ್ನುವ ಸಂದರ್ಭದಲ್ಲಿ ಆತನನ್ನು ಐಸಿಯುಗೆ ದಾಖಲಿಸಬಾರದು ಎಂದು ಶಿಫಾರಸ್ಸು ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.