ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನಾಳೆಯಿಂದ ಎರಡು ದಿನಗಳ ತಮಿಳುನಾಡು ಮತ್ತು ಲಕ್ಷದ್ವೀಪ ಪ್ರವಾಸ ಕೈಗೊಳ್ಳಲಿದ್ದಾರೆ. ತಮಿಳುನಾಡಿನ ತಿರುಚಿರಾಪಳ್ಳಿ ತಲುಪಲಿರುವ ಮೋದಿ ಅಲ್ಲಿ ನಾಳೆ ಭಾರತಿದಾಸನ್ ವಿಶ್ವವಿದ್ಯಾಲಯದ 38ನೇ ಘಟಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ರಧಾನಿಯವರು ನಾಳೆ ತಿರುಚಿರಾಪಳ್ಳಿಯಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ವಿಮಾನಯಾನ, ರೈಲು, ರಸ್ತೆ, ತೈಲ ಮತ್ತು ಅನಿಲ, ಹಡಗು ಮತ್ತು ಉನ್ನತ ಶಿಕ್ಷಣ ಕ್ಷೇತ್ರಗಳಿಗೆ ಸಂಬಂಧಿಸಿದ 19,850 ಕೋಟಿ ರೂಪಾಯಿಗಳ ಬಹುವಿಧದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ದೇಶಕ್ಕೆ ಸಮರ್ಪಿಸಲಿದ್ದಾರೆ ಮತ್ತು ಅಡಿಪಾಯ ಹಾಕಲಿದ್ದಾರೆ. ಅವರು ಬಹು ರೈಲ್ವೆ ಯೋಜನೆಗಳನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ. ಇವುಗಳಲ್ಲಿ 41.4 ಕಿಮೀ ಸೇಲಂ-ಮ್ಯಾಗ್ನೆಸೈಟ್ ಜಂಕ್ಷನ್-ಓಮಲೂರ್-ಮೆಟ್ಟೂರು ಅಣೆಕಟ್ಟು ವಿಭಾಗವನ್ನು ದ್ವಿಗುಣಗೊಳಿಸುವ ಯೋಜನೆ, ಮಧುರೈ – ಟುಟಿಕೋರಿನ್ನಿಂದ 160 ಕಿಮೀ ಉದ್ದದ ರೈಲು ಮಾರ್ಗದ ಭಾಗವನ್ನು ದ್ವಿಗುಣಗೊಳಿಸುವ ಯೋಜನೆ ಮತ್ತು ರೈಲು ಮಾರ್ಗ ವಿದ್ಯುದೀಕರಣಕ್ಕಾಗಿ ಮೂರು ಯೋಜನೆಗಳು ಒಳಗೊಂಡಿದೆ.
NH-81 ರ ತಿರುಚ್ಚಿ – ಕಲ್ಲಾಗಮ್ ವಿಭಾಗಕ್ಕೆ 39 ಕಿಮೀ ನಾಲ್ಕು ಲೇನ್ ರಸ್ತೆಯನ್ನು ಒಳಗೊಂಡಿರುವ ಐದು ರಸ್ತೆ ವಲಯದ ಯೋಜನೆಗಳನ್ನು ಪ್ರಧಾನ ಮಂತ್ರಿಯವರು ಲೋಕಾರ್ಪಣೆ ಮಾಡಲಿದ್ದಾರೆ. ಕಾಮರಾಜರ್ ಬಂದರಿನ ಜನರಲ್ ಕಾರ್ಗೋ ಬರ್ತ್-II ಅನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಅವರು ಕಲ್ಪಾಕ್ಕಂನ ಇಂದಿರಾ ಗಾಂಧಿ ಸೆಂಟರ್ ಫಾರ್ ಅಟಾಮಿಕ್ ರಿಸರ್ಚ್ (ಐಜಿಸಿಎಆರ್) ನಲ್ಲಿರುವ ಡೆಮಾನ್ಸ್ಟ್ರೇಷನ್ ಫಾಸ್ಟ್ ರಿಯಾಕ್ಟರ್ ಫ್ಯೂಯಲ್ ರಿಪ್ರೊಸೆಸಿಂಗ್ ಪ್ಲಾಂಟ್ (ಡಿಎಫ್ಆರ್ಪಿ) ಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಬಳಿಕ ಲಕ್ಷದ್ವೀಪದ ಅಗಟ್ಟಿ ತಲುಪಲಿರುವ ಪ್ರಧಾನಿ ಅಲ್ಲಿ ಸಾರ್ವಜನಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.