ಅಯೋಧ್ಯೆ: ಜನವರಿ 22 ರಂದು ರಾಮಮಂದಿರದ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಅಯೋಧ್ಯೆ ಪ್ರವಾಸಕೈಗೊಂಡಿದ್ದಾರೆ. ಈ ವೇಳೆ ಅವರು ಉಜ್ವಲ ಯೋಜನೆಯ ಫಲಾನುಭವಿ ಮೀರಾ ಮಾಂಝಿ ಅವರ ಮನೆಗೆ ದಿಢೀರ್ ಭೇಟಿ ನೀಡಿದರು. ಮೀರಾ ಮಾಂಝಿ ಅವರಿಗೂ ರಾಮ ಮಂದಿರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಆಹ್ವಾನ ನೀಡಲಾಗಿದೆ.
ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಮೀರಾ ಮಾಂಝಿ ಅವರ ಮನೆಗೆ ಪ್ರಧಾನಿ ಮೋದಿಯವರ ಭೇಟಿಯ ವೀಡಿಯೊವನ್ನು ಹಂಚಿಕೊಂಡ ನಂತರ ಮತ್ತು ಮೀರಾ ಅವರು ಉಜ್ವಲಾ ಯೋಜನೆಯ 10 ಕೋಟಿಯ ಫಲಾನುಭವಿ ಎಂದು ಹೇಳಿದ ನಂತರ ಸುದ್ದಿ ವೈರಲ್ ಆಗಿದೆ.
ಪ್ರಧಾನಿ ಮೋದಿ ತಮ್ಮ ಮನೆಗೆ ಬರುತ್ತಿದ್ದಾರೆ ಎಂಬುದು ನನಗೆ ತಿಳಿದಿರಲಿಲ್ಲ ಎಂದು ಮೀರಾ ಮಾಂಝಿ ಹೇಳಿದ್ದಾರೆ. ಒಂದು ಗಂಟೆಯ ಹಿಂದೆ ರಾಜಕೀಯ ನಾಯಕರೊಬ್ಬರು ಬರುತ್ತಾರೆ ಎಂದು ತಿಳಿಸಿದ್ದರು. “ಮೋದಿ ಬಂದರು, ಅವರು ನನ್ನ ಕುಟುಂಬದ ಸದಸ್ಯರೊಂದಿಗೆ ಮಾತನಾಡಿದರು. ಅವರು ಉಜ್ವಲ ಯೋಜನೆಯಲ್ಲಿ ನಮಗೆ ಸಿಗುತ್ತಿರುವ ಪ್ರಯೋಜನಗಳ ಬಗ್ಗೆ ಕೇಳಿದರು. ನಂತರ ಅವರು ನನ್ನನ್ನು ಕೇಳಿದರು, ನಾನು ಏನು ಬೇಯಿಸಿದ್ದೇನೆ ಎಂದು. ನಾನು ಅಕ್ಕಿ, ದಾಲ್ ಮತ್ತು ತರಕಾರಿಗಳು ಎಂದೆ. ಈ ಚಳಿಯಲ್ಲಿ ಚಹಾ ಉತ್ತಮವಾಗಿರುತ್ತದೆ ಅಲ್ಲವೇ ಅನ್ನುವ ಮೂಲಕ ಚಹಾ ಕೇಳಿದರು. ಚಹ ಕುಡಿದ ಬಳಿಕ ಸ್ವಲ್ಪ ಸಿಹಿಯಾಗಿದೆ ಎಂದರು. ನಾನು ಚಹಾವನ್ನು ಹೇಗಿಯೇ ತಯಾರಿಸುವುದು ಎಂದೆ” ಎಂದು ಮೀರಾ ಮಾಂಝಿ ಹೇಳಿದ್ದಾರೆ.
ಇದಕ್ಕೂ ಮೊದಲು, ಜನವರಿ 22 ರಂದು ರಾಮಮಂದಿರದ ಪ್ರಾಣ ಪ್ರತಿಷ್ಠೆಯ ಮೊದಲು ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ ನಡೆಸಿದರು. ಅವರು ಅಯೋಧ್ಯಾ ಧಾಮ್ ಜಂಕ್ಷನ್ ರೈಲು ನಿಲ್ದಾಣ ಎಂದು ಕರೆಯಲ್ಪಡುವ ಮರುಅಭಿವೃದ್ಧಿ ಹೊಂದಿದ ಅಯೋಧ್ಯೆ ರೈಲು ನಿಲ್ದಾಣದ ಮೊದಲ ಹಂತವನ್ನು ಉದ್ಘಾಟಿಸಿದರು ಮತ್ತು ಹೊಸ ಅಮೃತ್ ಭಾರತ್ ಮತ್ತು ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದರು.
अपनत्व और आत्मीयता!🙏🏻
अयोध्या धाम में पीएम @narendramodi जी ने आज 'उज्ज्वला योजना' की लाभार्थी बहन मीरा मांझी से भेंट किया एवं उन्हें 22 जनवरी को राम मंदिर में प्राण-प्रतिष्ठा अनुष्ठान में आमंत्रित किया। pic.twitter.com/iWN4CuMx3O
— Smriti Z Irani (@smritiirani) December 30, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.