ನವದೆಹಲಿ: ಯುವ ವಲಸಿಗರಿಗಾಗಿ ವಿದೇಶಾಂಗ ಸಚಿವಾಲಯದ ಪ್ರಮುಖ ಕಾರ್ಯಕ್ರಮ ‘ನೊ ಇಂಡಿಯಾ (ಭಾರತವನ್ನು ತಿಳಿಯಿರಿ)’ ತನ್ನ 20 ವರ್ಷಗಳನ್ನು ಪೂರೈಸಿದೆ.
ಸಚಿವಾಲಯದಲ್ಲಿ ಕಾನ್ಸುಲರ್, ಪಾಸ್ಪೋರ್ಟ್, ವೀಸಾ ಮತ್ತು ಸಾಗರೋತ್ತರ ಭಾರತೀಯ ವ್ಯವಹಾರಗಳ ಕಾರ್ಯದರ್ಶಿ ಮುಕ್ತೇಶ್ ಪರದೇಶಿ ಅವರು ನಿನ್ನೆ ನವದೆಹಲಿಯಲ್ಲಿ ಭಾರತವನ್ನು ತಿಳಿಯಿರಿ ಕಾರ್ಯಕ್ರಮದ 70 ನೇ ಆವೃತ್ತಿಯ ಮೌಲ್ಯಮಾಪಕ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು.
70ನೇ ನೋ ಇಂಡಿಯಾ ಕಾರ್ಯಕ್ರಮ ಇದೇ 11ರಿಂದ 29ರವರೆಗೆ ನಡೆಯಿತು. ಫಿಜಿ, ಮಾರಿಷಸ್, ಟ್ರಿನಿಡಾಡ್ ಮತ್ತು ಟೊಬಾಗೊ, ಸುರಿನಾಮ್, ಶ್ರೀಲಂಕಾ, ದಕ್ಷಿಣ ಆಫ್ರಿಕಾ, ಮ್ಯಾನ್ಮಾರ್, ಮಲೇಷಿಯಾ ಮತ್ತು ಕೊಲಂಬಿಯಾದಿಂದ 34 ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಕಾರ್ಯಕ್ರಮವು 20 ವರ್ಷಗಳ ಮಹತ್ವದ ಮೈಲಿಗಲ್ಲನ್ನು ತಲುಪಿದೆ, ಇದು ಭಾರತ ಸರ್ಕಾರದ ದೀರ್ಘಾವಧಿಯ ಅನಿವಾಸಿ ಭಾರತೀಯ ತೊಡಗಿಸಿಕೊಳ್ಳುವಿಕೆ ಕಾರ್ಯಕ್ರಮಗಳಲ್ಲಿ ಒಂದಾಗಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಭಾರತೀಯ ಅನಿವಾಸಿ ಯುವಕರು ಮತ್ತು ಅವರ ಪೂರ್ವಜರ ತಾಯ್ನಾಡಿನ ನಡುವೆ ನಿಕಟ ಸಂಪರ್ಕವನ್ನು ಬೆಳೆಸುವ ಪ್ರಾಥಮಿಕ ಉದ್ದೇಶದೊಂದಿಗೆ 2003 ರಲ್ಲಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಮೂರು ವಾರಗಳ ಕಾರ್ಯಕ್ರಮವು ಅನಿವಾಸಿ ಯುವಜನರಿಗೆ ಆಧುನಿಕ ಭಾರತದ ಬೆಳವಣಿಗೆ ಮತ್ತು ಅಭಿವೃದ್ಧಿಯ ಜೊತೆಗೆ ಭಾರತದ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಗೆ ಒಡ್ಡಿಕೊಳ್ಳುವುದನ್ನು ಕಲಿಸುತ್ತದೆ.
ಭಾರತವನ್ನು ತಿಳಿಯಿರಿ ಕಾರ್ಯಕ್ರಮವು ಎಲ್ಲಾ ದೇಶಗಳ 21 ರಿಂದ 35 ವರ್ಷ ವಯಸ್ಸಿನ ಭಾರತೀಯ ಮೂಲದ ವ್ಯಕ್ತಿಗಳಿಗೆ ಮುಕ್ತವಾಗಿದೆ ಎಂದು ಸಚಿವಾಲಯ ತಿಳಿಸಿದೆ. 71ನೇ ನೋ ಇಂಡಿಯಾ ಕಾರ್ಯಕ್ರಮವನ್ನು ಮುಂದಿನ ತಿಂಗಳ 3 ರಿಂದ 19 ರವರೆಗೆ ಆಯೋಜಿಸಲಾಗುವುದು ಎಂದು ಅದು ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.