ನವದೆಹಲಿ: ಈಶಾನ್ಯ ಪ್ರದೇಶದಿಂದ ಬಂಡಾಯವನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಗಳನ್ನು ಮುಂದಿಡುನವದೆಹಲಿ: ಕೇಂದ್ರ, ಅಸ್ಸಾಂ ಸರ್ಕಾರ ಮತ್ತು ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸೋಮ್ (ಉಲ್ಫಾ) ನಡುವೆ ಇಂದು ತ್ರಿಪಕ್ಷೀಯ ಶಾಂತಿ ಒಪ್ಪಂದಕ್ಕೆ ದೆಹಲಿಯಲ್ಲಿ ಸಹಿ ಹಾಕಲಾಯಿತು. ಈ ಮೂಲಕ ಈಶಾನ್ಯ ಪ್ರದೇಶದಲ್ಲಿನ ಅತಿದೊಡ್ಡ ಬಂಡಾಯ ಗುಂಪು ಎಂದು ಕರೆಸಿಕೊಂಡಿದ್ದ ಉಲ್ಫಾದ ಸದಸ್ಯರು ಬಂಡಾಯ ತೊರೆದು ಸಮಾಜದ ಮುಖ್ಯ ವಾಹಿನಿಗೆ ಬರುತ್ತಿದೆ.
ಆದರೆ ಪರೇಶ್ ಬರುವಾ ನೇತೃತ್ವದ ಉಲ್ಫಾ (ಸ್ವತಂತ್ರ) ಬಣ ಮಾತುಕತೆಗೆ ವಿರೋಧ ವ್ಯಕ್ತಪಡಿಸಿದೆ.
ಅಸ್ಸಾಂನ ಅತ್ಯಂತ ಹಳೆಯ ದಂಗೆಕೋರ ಗುಂಪಿನೊಂದಿಗಿನ ಶಾಂತಿ ಒಪ್ಪಂದವು ಅಕ್ರಮ ವಲಸೆ, ಸ್ಥಳೀಯ ಸಮುದಾಯಗಳಿಗೆ ಭೂಮಿಯ ಹಕ್ಕುಗಳು ಮತ್ತು ಅಸ್ಸಾಂನ ಅಭಿವೃದ್ಧಿಗೆ ಹಣಕಾಸಿನ ಪ್ಯಾಕೇಜ್ನಂತಹ ಸಮಸ್ಯೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ.
ಗೃಹ ಸಚಿವ ಅಮಿತ್ ಶಾ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಉಲ್ಫಾದ ಎಲ್ಲಾ ಸಮಂಜಸವಾದ ಬೇಡಿಕೆಗಳನ್ನು ಕಾಲಮಿತಿಯಲ್ಲಿ ಪೂರೈಸುವುದನ್ನು ಕೇಂದ್ರವು ಖಚಿತಪಡಿಸುತ್ತದೆ ಮತ್ತು ಸಂಘಟನೆಯಾಗಿ ಉಲ್ಫಾವನ್ನು ವಿಸರ್ಜಿಸಲಾಗುವುದು ಎಂದಿದ್ದಾರೆ.
“ಶಾಂತಿ ಪ್ರಕ್ರಿಯೆಯ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ಕೇಂದ್ರದಲ್ಲಿ ಅವರ ನಂಬಿಕೆಯನ್ನು ಗೌರವಿಸಲಾಗುವುದು ಎಂದು ಉಲ್ಫಾ ನಾಯಕತ್ವಕ್ಕೆ ನಾವು ಭರವಸೆ ನೀಡಲು ಬಯಸುತ್ತೇವೆ” ಎಂದಿದ್ದಾರೆ. ಅಲ್ಲದೇ ಈಶಾನ್ಯದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ತಂದ ಕೀರ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.