ಅಯೋಧ್ಯೆ: ಡಿಸೆಂಬರ್ 30 ರಂದು ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಗೆ ಭೇಟಿ ನೀಡಲಿರುವ ಹಿನ್ನಲೆಯಲ್ಲಿ ಅಯೋಧ್ಯ ನಗರಿಯನ್ನು ಮದುವಣಗಿತ್ತಿಯಂತೆ ಸಿಂಗರಿಸಲಾಗುತ್ತಿದೆ. ಇಲ್ಲಿನ ಬೀದಿ ಬೀದಿಗಳನ್ನು ಹೂವುಗಳಿಂದ ಅಲಂಕರಿಸಲಾಗಿದ್ದು ನಗರಕ್ಕೆ “ದೈವಿಕ ನೋಟವನ್ನು” ನೀಡಲಾಗುತ್ತಿದೆ.
ಗುರುವಾರ, ಸೇವಂತಿಗೆ, ಗೊಂಡೆ ಹೂಗಳ ಮಾಲೆಗಳನ್ನು ಅಯೋಧ್ಯೆಯ ಪುನರಾಭಿವೃದ್ಧಿಯಾದ ರಸ್ತೆಯ ಮಧ್ಯಭಾಗದಲ್ಲಿ ಸ್ಥಾಪಿಸಲಾದ ಅಲಂಕಾರಿಕ ದೀಪದ ಕಂಬಗಳ ಸುತ್ತಲೂ ಸುತ್ತಲಾಗಿದೆ. ಈ ರಸ್ತೆಯನ್ನು ರಾಮ್ ಪಥ್ ಎಂದು ನಾಮಕರಣ ಮಾಡಲಾಗಿದೆ. ಅಲ್ಲಿರುವ ದೀಪದ ಕಂಬಗಳು ಧಾರ್ಮಿಕ ಚಿಹ್ನೆಗಳನ್ನು ಚಿತ್ರಿಸುವ ವಿನ್ಯಾಸ ಹೊಂದಿವೆ.
ಇಂದು ನಗರವನ್ನು ಮತ್ತಷ್ಟು ಅಲಂಕಾರ ಮಾಡಲಾಗುತ್ತಿದ್ದು, ದೇಶದ ವಿವಿಧ ಭಾಗಗಳಿಂದ ಬಂದ ಕಾರ್ಮಿಕರು ರಾಮ್ ಕಥಾ ಪಾರ್ಕ್ನಲ್ಲಿ ಹೂಗಳನ್ನು ಕಲಾತ್ಮಕ ರಚನೆಗಳಲ್ಲಿ ನಿಖರವಾಗಿ ಜೋಡಿಸಲು ಶ್ರಮಿಸಿದರು.
ಈ ಅಲಂಕಾರಗಳು ಭಗವಾನ್ ರಾಮನ ಚಿತ್ರ, ಅವನ ಬಿಲ್ಲು ಮತ್ತು ಬಾಣ, ಭಗವಾನ್ ಹನುಮಾನ್, ಧಾರ್ಮಿಕ ತಿಲಕ, ಇತರ ಮಾದರಿಗಳಿಂದ ಪ್ರೇರಿತವಾಗಿವೆ.
ಡಿಸೆಂಬರ್ 30 ರಂದು ಅಯೋಧ್ಯೆಯು “ದೈವಿಕ ರೂಪ” ವನ್ನು ಹೊಂದಲಿದೆ ಎಂದು ನಗರದ ವಿವಿಧ ಭಾಗಗಳಲ್ಲಿ ಬಳಸಲಾಗುವ ಹೂವಿನ ಅಲಂಕಾರದಲ್ಲಿ ಕೆಲಸ ಮಾಡುತ್ತಿರುವ ಸೀತಾಪುರದ ಕೆಲಸಗಾರರು ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.