ನವದೆಹಲಿ: 2022-23ನೇ ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸಲು ಜುಲೈ 31 ರ ಗಡುವನ್ನು ತಪ್ಪಿಸಿಕೊಂಡ ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ಡಿಸೆಂಬರ್ 31, 2023 ರೊಳಗೆ ತೆರಿಗೆ ಪಾವತಿ ಮಾಡಬೇಕು ಎಂದಿದೆ.
ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿನ ಪೋಸ್ಟ್ ಮಾಡಿರುವ ಇಲಾಖೆ, ಇಂತಹ ತೆರಿಗೆದಾರರು ಡಿಸೆಂಬರ್ 31, 2023 ರೊಳಗೆ ತೆರಿಗೆ ಪಾವತಿ ಮಾಡಬೇಕು ಎಂದಿದೆ. ಆರ್ಥಿಕ ವರ್ಷಕ್ಕೆ ತಡವಾದ/ಪರಿಷ್ಕೃತ ಐಟಿಆರ್ ಅನ್ನು ಸಲ್ಲಿಸಲು ಇದು “ಕೊನೆಯ ಅವಕಾಶ” ಎಂದು ಪೋಸ್ಟ್ ಸ್ಪಷ್ಟಪಡಿಸಿದೆ. ಆದಾಯ ತೆರಿಗೆ ಇಲಾಖೆಯ ಪೋಸ್ಟ್ನಲ್ಲಿ ಪರಿಷ್ಕೃತ ಮತ್ತು ತಡವಾದ ಐಟಿಆರ್ಗಳ ನಡುವಿನ ವ್ಯತ್ಯಾಸವನ್ನು ಸಹ ಉಲ್ಲೇಖಿಸಲಾಗಿದೆ.
“ದಯವಿಟ್ಟು ಗಮನಹರಿಸಿ, ಡಿಸೆಂಬರ್ 31, 2023 ವರ್ಷ 2023-2024 ಕ್ಕೆ ತಡವಾದ/ಪರಿಷ್ಕೃತ ITR ಅನ್ನು ಸಲ್ಲಿಕೆ ಮಾಡಲು ನಿಮಗೆ ಕೊನೆಯ ಅವಕಾಶವಾಗಿದೆ. ನಿಗದಿತ ದಿನಾಂಕದ ಮೊದಲು ನಿಮ್ಮ ITR ಅನ್ನು ಸಲ್ಲಿಕೆ ಮಾಡಿ” ಎಂದು X ನಲ್ಲಿ ಪೋಸ್ಟ್ ಹೇಳಿದೆ. ಇಲಾಖೆಯು ತನ್ನ ವೆಬ್ಸೈಟ್ಗೆ ಲಿಂಕ್ ಅನ್ನು ಹಂಚಿಕೊಂಡಿದೆ, ಅಲ್ಲಿ ಬಳಕೆದಾರರು ಐಟಿಆರ್ಗಳನ್ನು ಸಲ್ಲಿಸುವ ಬಗ್ಗೆ ಎಲ್ಲಾ ಮಾಹಿತಿಯನ್ನು ಪಡೆಯಬಹುದು.
ಆದಾಯ ತೆರಿಗೆ ಇಲಾಖೆ ನಿಯಮಗಳು 2020-21ರ ಮೌಲ್ಯಮಾಪನ ವರ್ಷದಿಂದ ಜಾರಿಗೆ ಬರುವಂತೆ ಪ್ರತಿಯೊಬ್ಬ ವ್ಯಕ್ತಿಯೂ ಆದಾಯದ ರಿಟರ್ನ್ ಸಲ್ಲಿಸುವುದನ್ನು ಕಡ್ಡಾಯಗೊಳಿಸಿದೆ. ಯಾರು ಆದಾಯ ತೆರಿಗೆ ಪಾವತಿಸಬೇಕು ಎಂಬ ನಿಟ್ಟಿನಲ್ಲಿ ಮೂರು ಪ್ರಮುಖ ಷರತ್ತುಗಳನ್ನು ವಿಧಿಸಲಾಗಿದೆ. ಅವುಗಳೆಂದರೆ: ಒಬ್ಬ ವ್ಯಕ್ತಿಯು ಒಂದು ಅಥವಾ ಹೆಚ್ಚಿನ ಚಾಲ್ತಿ ಖಾತೆಯಲ್ಲಿ ರೂ.1 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಠೇವಣಿ ಮಾಡಿದ್ದರೆ, ವಿದೇಶಕ್ಕೆ ಪ್ರಯಾಣಿಸಲು ತನಗಾಗಿ ಅಥವಾ ಇತರ ಯಾವುದೇ ವ್ಯಕ್ತಿಗೆ ರೂ.2 ಲಕ್ಷಕ್ಕಿಂತ ಹೆಚ್ಚಿನ ಮೊತ್ತವನ್ನು ಖರ್ಚು ಮಾಡಿದ್ದರೆ, ವಿದ್ಯುತ್ ಬಿಲ್ ಪಾವತಿಗೆ ರೂ. 1 ಲಕ್ಷ ವಿನಿಯೋಗಿಸಿದ್ದರೆ ತೆರಿಗೆ ಪಾವತಿ ಕಡ್ಡಾಯವಾಗಿದೆ.
ನಿಗದಿತ ಸಮಯದ ಮಿತಿಯೊಳಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ವಿಫಲರಾದ ಜನರು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139 (4) ರ ಅಡಿಯಲ್ಲಿ ತಡವಾಗಿ ರಿಟರ್ನ್ ಸಲ್ಲಿಸಬಹುದು ಎಂದು ಇಲಾಖೆ ಹೇಳಿದೆ. ತಡವಾದ ITR ಗಾಗಿ ಯಾವುದೇ ಪ್ರತ್ಯೇಕ ನಮೂನೆ ಇಲ್ಲ, ನಿರ್ದಿಷ್ಟ ಮೌಲ್ಯಮಾಪನ ವರ್ಷಕ್ಕೆ ಸೂಚಿಸಲಾದ ಫಾರ್ಮ್ಗಳನ್ನು ಮೌಲ್ಯಮಾಪಕರು ಬಳಸಬೇಕಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.