ನವದೆಹಲಿ: 2024 ರ ಋತುವಿಗೆ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಳ ಮಾಡುವ ಪ್ರಸ್ತಾವನೆಗೆ ಕೇಂದ್ರ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಮಂಗಳವಾರ ಅನುಮೋದನೆ ನೀಡಿದೆ.
ಈ ಬಗ್ಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಮಾಹಿತಿ ನೀಡಿದ್ದು, ಮುಂಬರುವ ಹಂಗಾಮಿಗೆ ಎಂಎಸ್ಪಿಯು ಹಿಂದಿನ ಋತುವಿಗಿಂತ ಮಿಲ್ಲಿಂಗ್ ಕೊಬ್ಬರಿಗೆ ಕ್ವಿಂಟಲ್ಗೆ 300 ರೂಪಾಯಿ ಮತ್ತು ಚೆಂಡು ಕೊಬ್ಬರಿಗೆ ಕ್ವಿಂಟಲ್ಗೆ 250 ರೂಪಾಯಿ ಹೆಚ್ಚಳವಾಗಿದೆ ಎಂದು ಹೇಳಿದರು.
ಎಂಎಸ್ಪಿಯಲ್ಲಿ ಹೆಚ್ಚಳವು ತೆಂಗು ಬೆಳೆಗಾರರಿಗೆ ಉತ್ತಮ ಲಾಭದಾಯಕ ಆದಾಯವನ್ನು ಖಚಿತಪಡಿಸುತ್ತದೆ ಎಂದು ಸಚಿವರು ಹೇಳಿದ್ದಾರೆ.
2014-15ರಲ್ಲಿ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ 5,250 ರೂಪಾಯಿ ಎಂಎಸ್ಪಿ ಇತ್ತು. ಈಗ ಅದು 2024-25ರಲ್ಲಿ ಪ್ರತಿ ಕ್ವಿಂಟಲ್ಗೆ 11,160 ರೂ ಆಗಲಿದೆ ಎಂದು ಅವರು ಹೇಳಿದ್ದಾರೆ. ಚೆಂಡು ಕೊಪ್ಪರಿಗೆ 2014-15ರಲ್ಲಿ ಎಂಎಸ್ಪಿ ಕ್ವಿಂಟಲ್ಗೆ 5 500 ರೂ ಇತ್ತು. 2024-25ರಲ್ಲಿ ಕ್ವಿಂಟಲ್ಗೆ 12 ಸಾವಿರ ರೂ ಆಗಲಿದೆ ಎಂದಿದ್ದಾರೆ.
ಕೇರಳ ಮತ್ತು ತಮಿಳುನಾಡು ಮಿಲ್ಲಿಂಗ್ ಕೊಬ್ಬರಿಯ ಪ್ರಮುಖ ಉತ್ಪಾದಕರಾಗಿದ್ದು, ಕರ್ನಾಟಕದಲ್ಲಿ ಬಾಲ್ ಕೊಬ್ಬರಿಯನ್ನು ಪ್ರಧಾನವಾಗಿ ಉತ್ಪಾದಿಸಲಾಗುತ್ತದೆ. ಪ್ರಸಕ್ತ 2023 ರ ಹಂಗಾಮಿನಲ್ಲಿ, ಸರ್ಕಾರವು 1,493 ಕೋಟಿ ರೂಪಾಯಿ ವೆಚ್ಚದಲ್ಲಿ 1.33 ಲಕ್ಷ ಮೆಟ್ರಿಕ್ ಟನ್ ಕೊಬ್ಬರಿಯನ್ನು ದಾಖಲೆಯ ಪ್ರಮಾಣದಲ್ಲಿ ಸಂಗ್ರಹಿಸಿದೆ, ಸುಮಾರು 90 ಸಾವಿರ ರೈತರಿಗೆ ಇದರಿಂದ ಪ್ರಯೋಜನವಾಗಿದೆ. ಪ್ರಸಕ್ತ ಋತುವಿನ 2023 ರಲ್ಲಿನ ಸಂಗ್ರಹಣೆಯು ಹಿಂದಿನ ಋತುವಿಗಿಂತ 227 ಶೇಕಡಾ ಏರಿಕೆಯನ್ನು ಸೂಚಿಸುತ್ತದೆ.
ಇನ್ನೊಂದೆಡೆ ಆರ್ಥಿಕ ವ್ಯವಹಾರಗಳ ಸಮಿತಿಯು ಬಿಹಾರದ ದಿಘಾ ಮತ್ತು ಸೋನೆಪುರವನ್ನು ಸಂಪರ್ಕಿಸುವ ಗಂಗಾ ನದಿಗೆ ಅಡ್ಡಲಾಗಿ ಹೊಸ 4.56 ಕಿಲೋಮೀಟರ್ ಉದ್ದದ, ಆರು ಲೇನ್ ಹೈ ಲೆವೆಲ್ ಮತ್ತು ಎಕ್ಸ್ಟ್ರಾ ಡೋಸ್ಡ್ ಕೇಬಲ್-ಸ್ಟೇಡ್ ಸೇತುವೆಯನ್ನು ನಿರ್ಮಿಸಲು ಅನುಮೋದನೆ ನೀಡಿದೆ ಎಂದು ಠಾಕೂರ್ ಹೇಳಿದರು. ಈ ಯೋಜನೆಗೆ ಒಟ್ಟು 3064 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದರು. ಸೇತುವೆಯು ಸಂಚಾರವನ್ನು ವೇಗವಾಗಿಸುತ್ತದೆ ಮತ್ತು ಸುಲಭಗೊಳಿಸುತ್ತದೆ ಮತ್ತು ರಾಜ್ಯದ ಒಟ್ಟಾರೆ ಅಭಿವೃದ್ಧಿಗೆ ಕಾರಣವಾಗುತ್ತದೆ, ವಿಶೇಷವಾಗಿ ಉತ್ತರ ಬಿಹಾರಕ್ಕೆ ಪ್ರಯೋಜನಕಾರಿಯಾಗಲಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.