ಟೆಲ್ ಅವೀವ್: ಪ್ಯಾಲೆಸ್ತೀನ್ ಸಶಸ್ತ್ರ ಗುಂಪು ಹಮಾಸ್ಗೆ ಇಸ್ರೇಲ್ ಮತ್ತೊಮ್ಮೆ ಎಚ್ಚರಿಕೆ ನೀಡಿದೆ. ಸಂಪೂರ್ಣ ವಿಜಯ ಸಾಧಿಸುವವರೆಗೆ ಯುದ್ಧವನ್ನು ನಿಲ್ಲಿಸುವ ಮಾತೇ ಇಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಹೇಳಿದ್ದಾರೆ.
ಗಾಜಾ ಪಟ್ಟಿಯಲ್ಲಿ ಹಮಾಸ್ ಹೊಂದಿರುವ ಪ್ರತಿ ಒತ್ತೆಯಾಳುಗಳ ಬಿಡುಗಡೆಯನ್ನು ಭದ್ರಪಡಿಸುವ ರಾಷ್ಟ್ರದ ಅಚಲ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿದ ನೆತನ್ಯಾಹು, ಈ ನಿರ್ಣಾಯಕ ಗುರಿಯನ್ನು ಸಾಧಿಸಲು ಅಗತ್ಯವಾದ ಮಿಲಿಟರಿ ಒತ್ತಡ ಸೇರಿದಂತೆ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದಿದ್ದಾರೆ.
ನೆಸ್ಸೆಟ್ ಅನ್ನು ಉದ್ದೇಶಿಸಿ ಮಾತನಾಡಿದ ನೆತನ್ಯಾಹು ಅವರು, “ನಾವು ನಿಲ್ಲುವುದಿಲ್ಲ, ವಿಜಯದವರೆಗೆ ನಾವು ನಿಲ್ಲುವುದಿಲ್ಲ ಏಕೆಂದರೆ ನಮಗೆ ಬೇರೆ ಭೂಮಿ ಮತ್ತು ಬೇರೆ ಮಾರ್ಗವಿಲ್ಲ” ಎಂದಿದ್ದಾರೆ.
ಒತ್ತೆಯಾಳುಗಳ ಕುಟುಂಬಗಳು ಒತ್ತೆಯಾಳುಗಳ ರಕ್ಷಣೆಯಲ್ಲಿ ಸರ್ಕಾರ ಅನುಸರಿಸುತ್ತಿರುವ ವಿಳಂಬ ಧೋರಣೆಯ ಬಗ್ಗೆ ಸಮಾಧಾನವನ್ನು ವ್ಯಕ್ತಪಡಿಸಿವೆ ವಿಶೇಷ ನೆಸ್ಸೆಟ್ ಅಧಿವೇಶನದಲ್ಲಿ ಒತ್ತೆಯಾಳುಗಳ ಕುಟುಂಬಗಳು ಕೂಡ ಭಾಗಿಯಾಗಿದ್ದು, ವಿಳಂಬವನ್ನು ಪ್ರಶ್ನಿಸಿವೆ. ಇದಕ್ಕೆ ಉತ್ತರಿಸಿರುವ ನೆತನ್ಯಾಹು, “ನಾವು ಹೋರಾಟವನ್ನು ನಿಲ್ಲಿಸುವುದಿಲ್ಲ” ಎಂದು ಪ್ರತಿಪಾದಿಸಿದ್ದಾರೆ. ಆಗ ಗ್ಯಾಲರಿಯಲ್ಲಿ ಕುಳಿತಿದ್ದ ಒತ್ತೆಯಾಳುಗಳ ಸಂಬಂಧಿಗಳು ನಮಗೆ ಸಮಯವಿಲ್ಲ, ಈಗಲೇ ರಕ್ಷಣೆ ಮಾಡಬೇಕು ಎಂದು ಘೋಷಣೆಗಳನ್ನು ಕೂಗಿದ್ದಾರೆ. ತಮ್ಮವರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ನೆತನ್ಯಾಹು, ಅಂತಿಮ ವಿಜಯದವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂಬ ಭರವಸೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.