ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು ಗಾಜಾ ಪಟ್ಟಿಯಲ್ಲಿ ಮಾನವೀಯ ಕದನ ವಿರಾಮದ ಅಗತ್ಯವನ್ನು ಒತ್ತಿಹೇಳಿದ್ದಾರೆ. ಗಾಜಾ ಜನರ ಅನಿವಾರ್ಯ ಅಗತ್ಯಗಳನ್ನು ಪೂರೈಸಲು ಕದನ ವಿರಾಮವೊಂದೇ ಪರಿಹಾರ ಎಂದು ಅವರು ಹೇಳಿದ್ದಾರೆ.
ಯುಎನ್ ಭದ್ರತಾ ಮಂಡಳಿಯು ಗಾಜಾಗೆ ಮಾನವೀಯ ನೆರವು ಹೆಚ್ಚಿಸಲು ನಿರ್ಣಯವನ್ನು ಅಂಗೀಕರಿಸಿದ ನಂತರ ಹೇಳಿಕೆ ನೀಡಿರುವ ಅವರು, ಗಾಜಾದಲ್ಲಿನ ಜನರ ಹತಾಶ ಅಗತ್ಯಗಳನ್ನು ಪೂರೈಸಲು ಮತ್ತು ಅವರ ಮೇಲೆ ನಡೆಯುತ್ತಿರುವ ದುಃಸ್ವಪ್ನವನ್ನು ಕೊನೆಗೊಳಿಸಲು ಮಾನವೀಯ ಕದನ ವಿರಾಮವು ಏಕೈಕ ಮಾರ್ಗವಾಗಿದೆ ಎಂದು ತಿಳಿಸಿದರು. ಶುಕ್ರವಾರದ ಭದ್ರತಾ ಮಂಡಳಿಯ ನಿರ್ಣಯವು ಇದಕ್ಕೆ ಪೂರಕವಾಗಿದೆ, ಆದರೆ ಈ ನಿಟ್ಟಿನಲ್ಲಿ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂದು ಗುಟೆರಸ್ ಪ್ರತಿಪಾದಿಸಿದ್ದಾರೆ.
ಮಾನವೀಯ ನೆರವು ಸಿಬ್ಬಂದಿಗಳು ಗಾಜಾದಲ್ಲಿ ಸುರಕ್ಷಿತವಾಗಿ ಕೆಲಸ ಮಾಡಬಹುದೆಂದು ಖಚಿತಪಡಿಸಿಕೊಳ್ಳುವಂತೆ ಇಸ್ರೇಲ್ಗೆ ಕರೆ ನೀಡಿದ ಅವರು, ನಿಜವಾದ ಸಮಸ್ಯೆ ಎಂದರೆ ಇಸ್ರೇಲ್ ಈ ಆಕ್ರಮಣವನ್ನು ನಡೆಸುತ್ತಿರುವ ರೀತಿ ಗಾಜಾದೊಳಗೆ ಮಾನವೀಯ ನೆರವು ವಿತರಣೆಗೆ ಭಾರಿ ಅಡೆತಡೆಗಳನ್ನು ಸೃಷ್ಟಿಸುತ್ತಿದೆ ಎಂದು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.