ನವದೆಹಲಿ: ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ಅವರು ಎರಡು ದಿನಗಳ ಬುಡಕಟ್ಟು ಕಾರ್ಯಕ್ರಮ ‘ಆದಿ ವ್ಯಾಖ್ಯಾನ್’ ಅನ್ನು ನವದೆಹಲಿಯಲ್ಲಿ ಉದ್ಘಾಟಿಸಿದರು.
ಬುಡಕಟ್ಟು ಸಂಪ್ರದಾಯಗಳು ಮತ್ತು ಸಂಸ್ಕೃತಿಯ ಸಂಕೀರ್ಣತೆಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಲು ಮತ್ತು ಅವರ ಅಸ್ತಿತ್ವದ ಸವಾಲುಗಳನ್ನು ಅನ್ವೇಷಿಸುವ ಉದ್ದೇಶದಿಂದ ರಾಷ್ಟ್ರೀಯ ಬುಡಕಟ್ಟು ಸಂಶೋಧನಾ ಸಂಸ್ಥೆ (NTRI) ಕಾರ್ಯಕ್ರಮವನ್ನು ಆಯೋಜಿಸಿದೆ.
ಇದು ಬುಡಕಟ್ಟು ಗುರುತು ಮತ್ತು ರಾಷ್ಟ್ರದ ಸಾಂಸ್ಕೃತಿಕ ವೈವಿಧ್ಯತೆಗೆ ಬುಡಕಟ್ಟು ಕೊಡುಗೆಗಳನ್ನು ಅನ್ವೇಷಿಸುವ ಉಪಕ್ರಮವಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಬುಡಕಟ್ಟು ಜನಾಂಗದ ಗುರುತು, ಅವರ ಗುರುತಿಸುವಿಕೆ ಮತ್ತು ಸಂರಕ್ಷಣೆಗೆ ಒತ್ತು ನೀಡಲಾಗಿದೆ. ಬುಡಕಟ್ಟು ಜನಾಂಗದ ಅಸ್ಮಿತೆಯನ್ನು ಕಾಪಾಡಲು ಬುಡಕಟ್ಟು ಭಾಷೆ ಮತ್ತು ಸಾಹಿತ್ಯ ಮುಖ್ಯವಾಗಿದೆ ಎಂದು ಹೇಳಿದರು.
ಬುಡಕಟ್ಟು ಜನರ ಉನ್ನತಿಗಾಗಿ ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ (PM-JANMAN) ಉಪಕ್ರಮವನ್ನು ಒಳಗೊಂಡಂತೆ ನಿರ್ದಿಷ್ಟವಾಗಿ ದುರ್ಬಲ ಬುಡಕಟ್ಟು ಗುಂಪಿ (PVTG) ಗಾಗಿ ಸರ್ಕಾರವು ಮಾಡಿದ ಪ್ರಯತ್ನಗಳನ್ನು ಅವರು ವಿವರಿಸಿದರು.
ಪಂಚಾಯತಿಗಳ (ಪರಿಶಿಷ್ಟ ಪ್ರದೇಶಗಳ ವಿಸ್ತರಣೆ) (PESA) ಕಾಯಿದೆ- 1996, ಅರಣ್ಯ ಹಕ್ಕುಗಳ ಕಾಯಿದೆ (FRA)- 2006 ಮತ್ತು SC/STಗಳ ದೌರ್ಜನ್ಯ ತಡೆ ಕಾಯಿದೆ- 1989 ರ ಕುರಿತು ಮತ್ತಷ್ಟು ಚರ್ಚೆಗೆ ಆಯೋಜಾಸಲಾದ ಆದಿ ಮಂಥನವನ್ನು ಕೇಂದ್ರ ಸಚಿವರು ಶ್ಲಾಘಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.