ವಾರಣಾಸಿ: ದೆಹಲಿ-ವಾರಣಾಸಿ ನಡುವಣ ಎರಡನೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಈ ಮಾರ್ಗದಲ್ಲಿ ರೈಲು ಸಂಖ್ಯೆ – 04015 ನೊಂದಿಗೆ ಎರಡನೇ ರೈಲನ್ನು ಪ್ರಾರಂಭಿಸಲಾಗಿದೆ. ವಾರಣಾಸಿಯಿಂದ ಹೊರಡುವ ಈ ರೈಲು ಪ್ರಯಾಗ್ ರಾಜ್, ಕಾನ್ಪುರದ ಮೂಲಕ ನವದೆಹಲಿಗೆ ತಲುಪಲಿದೆ.
ದೇಶದಲ್ಲಿ ಪ್ರಾರಂಭಿಸಲಿರುವ ಎರಡನೇ ಕೇಸರಿ ಬಣ್ಣದ ವಂದೇ ಭಾರತ್ ರೈಲು ಇದಾಗಿದೆ ಎಂದು ರೈಲ್ವೆ ಸಚಿವಾಲಯದ ಮೂಲಗಳು ತಿಳಿಸಿವೆ. ಉತ್ತರ ರೈಲ್ವೆ ತನ್ನ ಪತ್ರಿಕಾ ಹೇಳಿಕೆಯೊಂದಿಗೆ ಕೇಸರಿ ಬಣ್ಣದ ರೈಲಿನ ಫೋಟೋವನ್ನು ಸಹ ಹಂಚಿಕೊಂಡಿದೆ.
ಈ ರೈಲು ಪ್ರಯಾಣಿಕರ ಸಮಯವನ್ನು ಉಳಿತಾಯ ಮಾಡುವುದು ಮಾತ್ರವಲ್ಲದೇ ಆಯಾ ಪ್ರದೇಶದ ಸಂಸ್ಕೃತಿ, ಆರ್ಥಿಕತೆಗೆ ಕೊಡುಗೆಯನ್ನೂ ನೀಡಲಿದೆ.
ರೈಲು ವಾರಣಾಸಿಯಿಂದ ಬೆಳಿಗ್ಗೆ 6:00 ಗಂಟೆಗೆ ಪ್ರಯಾಣ ಪ್ರಾರಂಭವಾಗಲಿದ್ದು, ಮಧ್ಯಾಹ್ನ 2:05 ಕ್ಕೆ ನವದೆಹಲಿ ತಲುಪಲಿದೆ. ಬಳಿಕ ರೈಲು ವಾರಣಾಸಿಗೆ 55 ನಿಮಿಷಗಳ ನಂತರ ಮಧ್ಯಾಹ್ನ 3:00 ಕ್ಕೆ ಹೊರಟು ರಾತ್ರಿ 11:05 ಕ್ಕೆ ತಲುಪುತ್ತದೆ.
#WATCH | Prime Minister Narendra Modi flags off four trains at the Vikas Bharat Sankalp Yatra in Varanasi pic.twitter.com/Ip7uUVEn0l
— ANI (@ANI) December 18, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.