ನವದೆಹಲಿ: ಸಣ್ಣ ನೆರೆಹೊರೆಯವರ ಜೊತೆ ಚೀನಾ “ವೋಲ್ಫ್ ವಾರಿಯರ್ ಡಿಪ್ಲೊಮಸಿ” ಮತ್ತು “ಸಲಾಮಿ-ಸ್ಲೈಸಿಂಗ್” ತಂತ್ರಗಳನ್ನು ಅನುಸರಿಸುತ್ತಾ ಬಂದಿದೆ. ಆದರೆ ಭಾರತ ಚೀನಾದ ಕುಚೇಷ್ಟೆಯನ್ನು ಸಹಿಸದೆ ಎದುರುತ್ತರ ನೀಡಿದ್ದನ್ನು ಜಗತ್ತು ನೋಡಿತು ಮತ್ತು ಭಾರತೀಯ ಸೇನೆಯು ನೆರೆಯ ದೇಶದ ಕುಚೋದ್ಯಕ್ಕೆ ಸವಾಲು ಹಾಕಲು ಮುಂದಾಯಿತು ಎಂದು ಮಾಜಿ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಾಣೆ ಹೇಳಿದ್ದಾರೆ.
2020 ರಲ್ಲಿ ಪೂರ್ವ ಲಡಾಖ್ನಲ್ಲಿ ಚೀನಾದ ಆಕ್ರಮಣಕ್ಕೆ ಭಾರತದ ಪ್ರತಿಕ್ರಿಯೆಯನ್ನು ವಿವರಿಸಿದ ಸಂದರ್ಭದಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ.
ನರವಾಣೆ ತನ್ನ ಆತ್ಮಚರಿತ್ರೆ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ಯಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಮೊದಲ ಬಾರಿಗೆ ಸಾವುನೋವುಗಳನ್ನು ಅನುಭವಿಸಿದ ಸಂದರ್ಭದ ಒಳನೋಟವನ್ನು ನೀಡಿದ್ದಾರೆ. ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ಗಾಲ್ವಾನ್ ಘರ್ಷಣೆ ಸಂಭವಿಸಿದ ಜೂನ್ 16 ಅನ್ನು ಯಾವತ್ತೂ ಮರೆಯುವುದಿಲ್ಲ ಎಂದಿದ್ದಾರೆ.
ಮುಂಚೂಣಿಯಲ್ಲಿರುವ ಸೇನಾ ಜನರಲ್ಗಳಲ್ಲಿ ಒಬ್ಬರಾದ ನರವಾಣೆ, ಗಾಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯ ಮೊದಲು ಮತ್ತು ನಂತರ ಭಾರತ-ಚೀನಾ ಮುಖಾಮುಖಿಯ ಬಗ್ಗೆ ತಮ್ಮ ಆತ್ಮಚರಿತ್ರಯಲ್ಲಿ ವಿವರಿಸಿದ್ದಾರೆ. ಚೀನಾದ ಕ್ರಮಕ್ಕೆ ಭಾರತದ ಒಟ್ಟಾರೆ ಪ್ರತಿಕ್ರಿಯೆ ಮತ್ತು LACಯಲ್ಲಿ ಸೇನೆಯ ಯುದ್ಧ ಸನ್ನದ್ಧತೆಯನ್ನು ಬಲಪಡಿಸಲು ಇದು ಹೇಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸಿತು ಎಂಬ ಬಗ್ಗೆ ವಿವರಿಸಿದ್ದಾರೆ.
ಜೂನ್ 2020 ರಲ್ಲಿ ಗಾಲ್ವಾನ್ ಕಣಿವೆಯ ಘರ್ಷಣೆಯಲ್ಲಿ 20 ಸೇನಾ ಸಿಬ್ಬಂದಿಗಳ ಸಾವನ್ನು ನೆನಪಿಸಿಕೊಂಡಿರುವ ಅವರು, ಇದು ನನ್ನ ಇಡೀ ವೃತ್ತಿಜೀವನದ ಅತ್ಯಂತ ದುಃಖದ ದಿನಗಳಲ್ಲಿ ಒಂದಾಗಿದೆ ಎಂದಿದ್ದಾರೆ.
ಡಿಸೆಂಬರ್ 31, 2019 ರಿಂದ ಏಪ್ರಿಲ್ 30, 2022 ರವರೆಗಿನ ಸೇನಾ ಮುಖ್ಯಸ್ಥರಾಗಿ ಅವರ ಅಧಿಕಾರಾವಧಿಯು ಗಡಿಯಲ್ಲಿ ಚೀನಾದ ಸವಾಲುಗಳನ್ನು ಎದುರಿಸಿದ ಮೂಲಕವೇ ಗುರುತಿಸಲ್ಪಟ್ಟಿದೆ ಮತ್ತು ಸೇನಾಪಡೆಯ ಯುದ್ಧ ಸಾಮರ್ಥ್ಯಗಳನ್ನು ಹೆಚ್ಚಿಸಲು ದೀರ್ಘಾವಧಿಯ ಸುಧಾರಣಾ ಕ್ರಮಗಳನ್ನು ಒಳಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.