ನವದೆಹಲಿ: ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಅವರು ಭಯೋತ್ಪಾದಕ ಸಂಘಟನೆಗಳು ಮತ್ತು ಅವರಿಗೆ ಧನಸಹಾಯ ನೀಡುವವರ ವಿರುದ್ಧ ಶೂನ್ಯ ಸಹಿಷ್ಣುತೆಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ವಿಶ್ವಸಂಸ್ಥೆಯನ್ನು ಒತ್ತಾಯಿಸಿದ್ದಾರೆ.
ನ್ಯೂಯಾರ್ಕ್ನಲ್ಲಿ ನಡೆದ UNSC ಓಪನ್ ಡಿಬೇಟ್ ಆನ್ ಸ್ಮಾಲ್ ಆರ್ಮ್ಸ್ ಅನ್ನು ಉದ್ದೇಶಿಸಿ ಮಾತನಾಡಿದ ಅವರು, ಸಣ್ಣ ಶಸ್ತ್ರಾಸ್ತ್ರಗಳು ಮತ್ತು ಲಘು ಶಸ್ತ್ರಾಸ್ತ್ರಗಳು ಮತ್ತು ಸಂಬಂಧಿತ ಮದ್ದುಗುಂಡುಗಳ ಅಕ್ರಮ ಸಾಗಣೆಯು ಸಶಸ್ತ್ರ ಮತ್ತು ಭಯೋತ್ಪಾದಕ ಗುಂಪುಗಳು ಸಂಘರ್ಷಗಳಲ್ಲಿ ತೊಡಗುವುದಕ್ಕೆ ಕಾರಣವಾಗುತ್ತಿದೆ. ಅಂತಹ ಭಯೋತ್ಪಾದಕ ಸಂಘಟನೆಗಳು ಹೊಂದಿರುವ ಶಸ್ತ್ರಗಳ ಪ್ರಮಾಣ ಮತ್ತು ಗುಣಮಟ್ಟದ ಹೆಚ್ಚಳವು ಅವರಿಗೆ ರಾಷ್ಟ್ರಗಳ ಬೆಂಬಲ ಮತ್ತು ಪ್ರಾಯೋಜಕತ್ವ ಇದೆ ಎಂಬುದನ್ನು ನೆನಪಿಸುತ್ತದೆ ಎಂದು ಕಾಂಬೋಜ್ ಹೇಳಿದ್ದಾರೆ.
ಎಲ್ಲಾ ಯುದ್ಧಸಾಮಗ್ರಿಗಳು ಮತ್ತು ಸಂಬಂಧಿತ ವಸ್ತುಗಳ ರಫ್ತು ನಿಯಂತ್ರಿಸಲು ಭಾರತದ ಪ್ರಯತ್ನಗಳನ್ನು ಎತ್ತಿ ತೋರಿಸಿದ ಅವರು, ವಾಸ್ಸೆನಾರ್ ಅರೇಂಜ್ಮೆಂಟ್ನಲ್ಲಿ ಭಾರತದ ಭಾಗವಹಿಸುವಿಕೆಯನ್ನು ಹಂಚಿಕೊಂಡರು. ಭಾರತವು ಅದರ ಪ್ರಕಾರವೇ, ಯುಎನ್ ಪ್ರೋಗ್ರಾಂ ಆಫ್ ಆಕ್ಷನ್ ಮತ್ತು ಅಂತರರಾಷ್ಟ್ರೀಯ ಟ್ರೇಸಿಂಗ್ ಉಪಕರಣದ ಅನುಷ್ಠಾನವನ್ನು ಬಲಪಡಿಸಲು ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ಪ್ರಯತ್ನಗಳನ್ನು ದ್ವಿಗುಣಗೊಳಿಸುವುದನ್ನು ಬೆಂಬಲಿಸುತ್ತದೆ ಎಂದು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.