ಬೆಂಗಳೂರು: ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್ನ ಲೇಖಕ ಮತ್ತು ಕ್ರೈಸ್ಥ ಧರ್ಮಪ್ರಚಾರಕ ಆಲ್ಫ್ ಲುಕಾವ್ ಅವರು ಬೆಂಗಳೂರಿನಲ್ಲಿ ಡಿಸೆಂಬರ್ 16 ಮತ್ತು 17 ರಂದು ಸಂಜೆ 4 ರಿಂದ 9 ರವರೆಗೆ ‘ಪ್ರೇ ಫಾರ್ ಇಂಡಿಯಾ ಕಾನ್ಫರೆನ್ಸ್ 2023ʼ ಎಂಬ ಧಾರ್ಮಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದರು. ಆದರೆ ಭಾರತೀಯ ವೀಸಾ ನಿಯಮಾವಳಿಗಳ ಪ್ರಕಾರ ಯಾವುದೇ ರೀತಿಯ ವೀಸಾವನ್ನು ಹೊಂದಿರುವ ವಿದೇಶಿ ಪ್ರಜೆಗಳಿಗೆ ಭಾರತದಲ್ಲಿ ತಮ್ಮ ಧರ್ಮವನ್ನು ಬೋಧಿಸಲು ಅಥವಾ ಪ್ರಚಾರಪಡಿಸಲು ಅನುಮತಿಯಿಲ್ಲ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ ಬಳಿಕ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು.
ಕ್ರೈಸ್ಥ ಧರ್ಮಪ್ರಚಾರಕ ಆಲ್ಫ್ ಲುಕಾವ್ ಸತ್ತ ವ್ಯಕ್ತಿಯನ್ನು ಬದುಕಿಸುತ್ತೇನೆ ಎಂದು ಜನರನ್ನು ನಂಬಿಸಿದ್ದರು. ಈ ಕಾರಣಕ್ಕೆ ಅವರ ವಿರುದ್ಧ ದಕ್ಷಿಣ ಆಫ್ರಿಕಾದಲ್ಲಿ ಪ್ರಕರಣವೂ ದಾಖಲಾಗಿದೆ. ಇಂತಹ ವಿವಾದಾತ್ಮಕ ಪಾದ್ರಿಯನ್ನು ಭಾರತಕ್ಕೆ ಕರೆಸಿಕೊಳ್ಳಲು ಮುಂದಾದ ಆಯೋಜಕರ ಬಗ್ಗೆಯೂ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಬೆಳವಣಿಗೆ ನಂತರ, “ಎಲ್ಲಾ ಆಳ ಅಗಲಗಳನ್ನು ಮೀರಿ ಅನಿರೀಕ್ಷಿತ ಮತ್ತು ಅನಿವಾರ್ಯ ಸಂದರ್ಭಗಳಿಂದಾಗಿ ಡಿಸೆಂಬರ್ 16 ಮತ್ತು 17 ರಂದು ಅರಮನೆ ಮೈದಾನದಲ್ಲಿ ನಡೆಯಲಿದ್ದ ಪ್ರೇ ಫಾರ್ ಇಂಡಿಯಾ ಕಾನ್ಫರೆನ್ಸ್ 2023 ಅನ್ನು ರದ್ದುಗೊಳಿಸಲಾಗಿದೆ ಎಂದು ಘೋಷಿಸಲು ನಾವು ವಿಷಾದಿಸುತ್ತೇವೆ” ಎಂದು ಆಯೋಜಕರು ಟ್ವಿಟ್ ಮಾಡಿದ್ದಾರೆ.
ಆಯೋಜಕರು ಕಾನೂನನ್ನು ಧಿಕ್ಕರಿಸಿ ವಿದೇಶಿ ಪಾದ್ರಿಯನ್ನು ಬೋಧಿಸಲು ಅನುವು ಮಾಡಿಕೊಡಬೇಕು ಎಂದು ಹೈಕೋರ್ಟ್ಗೆ ಅರ್ಜಿಯನ್ನೂ ಸಲ್ಲಿಸಿದ್ದರೂ, ಆದರೆ ಹಿಂದೂ ಕಾರ್ಯಕರ್ತ ಗಿರೀಶ್ ಭಾರದ್ವಾಜ್ ಅವರು ಕಾನೂನು ಪಾಲಿಸಬೇಕು ಎಂದು “ಮಧ್ಯಂತರ ಅರ್ಜಿ”ಯನ್ನೂ ಸಲ್ಲಿಸಿದರು.
ಗಿರೀಶ್ ಭಾರದ್ವಾಜ್ ಅವರು ಕಮಿಷನರ್ ಆಫ್ ಇಮಿಗ್ರೇಷನ್ ಮತ್ತು ವಿದೇಶಿಯರ ಪ್ರಾದೇಶಿಕ ನೋಂದಣಿ ಅಧಿಕಾರಿ (FRRO)ಗೆ ಈ ಬಗ್ಗೆ ಪತ್ರವನ್ನೂ ಸಲ್ಲಿಸಿ, ಡಿಸೆಂಬರ್ 16 ಮತ್ತು 17 ರಂದು ಅರಮನೆ ಮೈದಾನ, ಗೇಟ್ ನಂ. 1, ಕೃಷ್ಣ ವಿಹಾರ್ನಲ್ಲಿ ನಡೆಯಲಿರುವ ಕಾರ್ಯಕ್ರಮವು ದಕ್ಷಿಣ ಆಫ್ರಿಕಾದ ಪ್ರಜೆಯಾಗಿರುವ ಪಾದ್ರಿ ಆಲ್ಫ್ ಲುಕಾವ್ ಅವರ ಭಾಷಣವನ್ನು ಒಳಗೊಂಡಿದೆ ಎಂದು ಉಲ್ಲೇಖಿಸಿದ್ದರು.
“ಭಾರತೀಯ ವೀಸಾ ನಿಯಮಗಳ ಪ್ರಕಾರ, ಯಾವುದೇ ರೀತಿಯ ವೀಸಾ ಹೊಂದಿರುವ ವಿದೇಶಿಯರು ಭಾರತದಲ್ಲಿ ತಮ್ಮ ಧರ್ಮವನ್ನು ಬೋಧಿಸಲು ಅಥವಾ ಪ್ರಚಾರ ಮಾಡಲು ಅನುಮತಿ ಇಲ್ಲ ಮತ್ತು ಭಾರತಕ್ಕೆ ಹಾಜರಾಗಲು ಬಯಸುವ ಧಾರ್ಮಿಕ ಬೋಧಕರಿಗೆ ವೀಸಾ ನೀಡಲು ನಿಯಮಗಳು ಅನುಮತಿ ನೀಡುವುದಿಲ್ಲ” ಎಂದು ಪತ್ರದಲ್ಲಿ ತಿಳಿಸಿದ್ದರು.
ಭಾರತೀಯ ವೀಸಾವನ್ನು ಪಡೆಯುವುದಕ್ಕಾಗಿ ಪಾದ್ರಿ ಭಾರತೀಯ ದೂತಾವಾಸವನ್ನು ವಂಚಿಸಿದ್ದಾರೆ ಮತ್ತು ಭಾರತಕ್ಕೆ ಅವರ ಪ್ರಯಾಣವು ಇವಾಂಜೆಲಿಕಲ್ ಮತಾಂತರದ ಏಕೈಕ ಉದ್ದೇಶದಿಂದ ಕೂಡಿದೆ. ಭಾರತೀಯ ವೀಸಾ ನಿಯಮಗಳ ಉಲ್ಲಂಘನೆಯನ್ನು ತಡೆಯಲು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ನಾನು ನಿಮ್ಮನ್ನು ವಿನಂತಿಸುತ್ತೇನೆ ಎಂದು ಭಾರಧ್ಜಜ್ ಪತ್ರದಲ್ಲಿ ಮನವಿ ಮಾಡಿದ್ದರು.
ಅದರಂತೆ ಕೊನೆಗೆ ಆಯೋಜಕರು ಕಾರ್ಯಕ್ರಮವನ್ನು ರದ್ದುಪಡಿಸಿದ್ದಾರೆ. ಈವೆಂಟ್ ಅನ್ನು ಶಾಲೋಮ್ ಮತ್ತು ಆಲ್ ಇಂಡಿಯಾ ಕ್ರಿಶ್ಚಿಯನ್ ಫೆಡರೇಶನ್ ಸಹಯೋಗದಲ್ಲಿ ಆಯೋಜಿಸಲಾಗಿದೆ.
Pray for India cancelled! pic.twitter.com/FC2UlRy3Kv
— Girish Bharadwaj (@Girishvhp) December 15, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.