ಚಿತ್ರದುರ್ಗ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಕರ್ನಾಟಕದ ಚಿತ್ರದುರ್ಗದ ಏರೋನಾಟಿಕಲ್ ಟೆಸ್ಟ್ ರೇಂಜ್ನಿಂದ ಸ್ಥಳೀಯ ಹೈ-ಸ್ಪೀಡ್ ಫ್ಲೈಯಿಂಗ್-ವಿಂಗ್ ಮಾನವರಹಿತ ವೈಮಾನಿಕ ವಾಹನದ (UAV) ಹಾರಾಟದ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿದೆ.
ಡಿಆರ್ಡಿಒ ಅಧಿಕೃತ ಹೇಳಿಕೆಯಲ್ಲಿ, “ಅಟೊನೊಮಸ್ ಫ್ಲೈಯಿಂಗ್ ವಿಂಗ್ ಟೆಕ್ನಾಲಜಿ ಡೆಮಾನ್ಸ್ಟ್ರೇಟರ್ (ಎಫ್ಡಬ್ಲ್ಯೂಟಿಡಿ)” ಎಂದು ಕರೆಯುವ ಪ್ರಯೋಗವು ಯಶಸ್ವಿಯಾಗಿದ್ದು, ದೇಶದಲ್ಲಿ ತಂತ್ರಜ್ಞಾನದ ಸನ್ನದ್ಧತೆಯ ಮಟ್ಟಗಳಲ್ಲಿ ಪರಿಪಕ್ವತೆಗೆ ಸಾಕ್ಷಿಯಾಗಿದೆ ಎಂದಿದೆ.
ಗ್ರೌಂಡ್ ರಾಡಾರ್ಗಳು ಅಥವಾ ಮೂಲಸೌಕರ್ಯ ಅಥವಾ ಪೈಲಟ್ನ ಅಗತ್ಯವಿಲ್ಲದೆಯೇ ಈ ಹೈ ಸ್ಪೀಡ್ ಯುಎವಿಯ ಅಟೊನೊಮಸ್ ಲ್ಯಾಂಡಿಂಗ್ ಅದರ ವಿಶಿಷ್ಟ ಸಾಮರ್ಥ್ಯವನ್ನು ಪ್ರದರ್ಶಿಸಿದೆ, ಈ ಮೂಲಕ ಸಮೀಕ್ಷಾ ನಿರ್ದೇಶಾಂಕಗಳೊಂದಿಗೆ ಯಾವುದೇ ರನ್ವೇಯಿಂದ ಟೇಕ್-ಆಫ್ ಮತ್ತು ಲ್ಯಾಂಡಿಂಗ್ ಅನ್ನು ಮಾಡಲು ಇದು ದಕ್ಷವಾಗಿದೆ ಎಂದು DRDO ಹೇಳಿದೆ.
“ಜಿಪಿಎಸ್ ನ್ಯಾವಿಗೇಶನ್ನ ನಿಖರತೆ ಮತ್ತು ಸಮಗ್ರತೆಯನ್ನು ಸುಧಾರಿಸಲು GPS Aided GEO ಆಗ್ಮೆಂಟೆಡ್ ನ್ಯಾವಿಗೇಷನ್ (GAGAN) ರಿಸೀವರ್ಗಳನ್ನು ಬಳಸಿಕೊಂಡು ಸ್ಥಳೀಯ ಉಪಗ್ರಹ ಆಧಾರಿತ ವರ್ಧನೆಯೊಂದಿಗೆ ಆನ್ಬೋರ್ಡ್ ಸಂವೇದಕ ಡೇಟಾ ಸಮ್ಮಿಳನವನ್ನು ಬಳಸಿಕೊಂಡು ಇದು ಸಾಧ್ಯವಾಯಿತು” ಎಂದು R&D ಸಂಸ್ಥೆ ವಿವರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.