ತಿರುವನಂತಪುರಂ: ಹಿಂದೂಗಳ ಪವಿತ್ರ ಧಾರ್ಮಿಕ ಕ್ಷೇತ್ರವಾದ ಶಬರಿಮಲೆ ಕೇರಳ ಕಮ್ಯೂನಿಸ್ಟ್ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಅವ್ಯವಸ್ಥೆಯ ಆಗರವಾಗಿ ಮುಂದುವರೆದಿದೆ. ಮಾಲೆ ಧರಿಸಿ ವ್ರತಾಚರಣೆ ನಡೆಸಿ ಶಬರಿಮಲೆಗೆ ತೆರಳುವ ಭಕ್ತರು 18 ಗಂಟೆ ಸರದಿಯಲ್ಲಿ ನಿಂತರೂ ದೇವರ ಮುಖವನ್ನು ನೋಡುವ ಭಾಗ್ಯ ದೊರೆಯುತ್ತಿಲ್ಲ. ಭದ್ರತಾ ಸಿಬ್ಬಂದಿ ದೇವರ ದರ್ಶನಕ್ಕೂ ಮುನ್ನವೇ ನಮ್ಮನ್ನು ಎಳೆದು ಹೊರಗೆ ಹಾಕುತ್ತಿದ್ದಾರೆ ಎಂದು ಭಕ್ತರು ದೂರಿದ್ದಾರೆ.
ಭಕ್ತರ ನಿರ್ವಹಣೆಯಲ್ಲಿ ಕೇರಳ ಸರ್ಕಾರ ಸರ್ಕಾರ ಪೂರ್ಣ ವಿಫಲವಾಗಿದೆ. ಬೆಟ್ಟದ ಬುಡದವರೆಗೆ ಬಸ್ನಲ್ಲಿ ಹೋಗಿ ಅಲ್ಲಿಂದ ಕಾಲ್ನಡಿಗೆಯಲ್ಲೇ ಮೇಲೇರಬೇಕು. ಬಳಿಕ ಸರದಿ ಉದ್ದ ಇರುವ ಕಾರಣ ಮಕ್ಕಳು, ವೃದ್ಧ ಭಕ್ತರು ಕೂಡಾ ಅರಣ್ಯದಲ್ಲಿ ಮಲಗಿ, ಅಲ್ಲೇ ನದಿಯಲ್ಲೇ ಸ್ನಾನ ಮಾಡಬೇಕಾದ ಪರಿಸ್ಥಿತಿ ಇದೆ ಎಂದಿದ್ದಾರೆ.
ಆನ್ಲೈನಲ್ಲಿ ದರ್ಶನಕ್ಕೆ ಬುಕ್ ಮಾಡಿಕೊಂಡವರ ಜೊತೆಗೆ ನಿತ್ಯ 5,00,000 ಹೆಚ್ಚುವರಿ ಭಕ್ತರಿಗೂ ಪ್ರವೇಶ ಕಲ್ಪಿಸಲಾಗಿದೆ. ಆದರೆ ಅದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳದ ಕಾರಣ ಈ ಗೊಂದಲ ಎದುರಾಗಿದೆ ಎಂದು ವರದಿಗಳು ತಿಳಿಸಿವೆ.
ಕೇರಳ ಸರ್ಕಾರಕ್ಕೆ ಶಬರಿಮಲೆಯಿಂದ ಸುಮಾರು 310 ಕೋಟಿ ರೂಪಾಯಿ ಆದಾಯ ಬರುತ್ತದೆ. ಆದರೂ ಕೂಡ ಅಲ್ಲಿ ಯಾವುದೇ ಮೂಲ ಸೌಕರ್ಯಗಳನ್ನು ಕಲ್ಪಿಸಲು ಕಮ್ಯೂನಿಸ್ಟ್ ಸರ್ಕಾರ ವಿಫಲವಾಗಿದೆ. ಇಲ್ಲಿ ಅಭಿವೃದ್ಧಿ ಶೂನ್ಯವಾಗಿದ್ದು, ರಸ್ತೆ, ಬಸ್, ಶೌಚಾಲಯ ವ್ಯವಸ್ಥೆಯೂ ಸಮರ್ಪಕವಾಗಿಲ್ಲ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.