ನವದೆಹಲಿ: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ ಅವರು ಗುರುವಾರ ದೆಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ – ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮಲೇರಿಯಾ ರಿಸರ್ಚ್ (ICMR-NIMR) ನಲ್ಲಿ ಐದು ಹೊಸ ಸೌಲಭ್ಯಗಳನ್ನು ಉದ್ಘಾಟಿಸಿದರು.
ಸೌಲಭ್ಯಗಳಲ್ಲಿ ಪರೀಕ್ಷಾ ಸಂಶೋಧನಾ ಪ್ರಯೋಗಾಲಯ, ನಾವೀನ್ಯತೆ ಸಂಕೀರ್ಣ, ಕಾನ್ಫರೆನ್ಸ್ ಹಾಲ್ ಸಂಕೀರ್ಣ, 300 ಆಸನಗಳ ಸಭಾಂಗಣ ಸೇರಿವೆ. ಉದ್ಘಾಟನೆ ವೇಳೆ ಮಾಂಡವೀಯ ಅವರು,‘ಈ ಉದ್ಘಾಟನೆಯು ಆರೋಗ್ಯದ ಪ್ರತಿಯೊಂದು ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಆವಿಷ್ಕಾರದತ್ತ ಸರ್ಕಾರದ ಗಮನವನ್ನು ಸೂಚಿಸುತ್ತದೆ’ ಎಂದು ಹೇಳಿದರು.
“ಕಳೆದ ನಾಲ್ಕು ದಶಕಗಳಲ್ಲಿ,ಈ ಕೇಂದ್ರಗಳು ಹೊಸ ವೈರಲ್ ಸೋಂಕುಗಳು, ಅತಿಸಾರ ಅಸ್ವಸ್ಥತೆಗಳು, HIV/AIDS, ಕ್ಷಯ, ಅಧಿಕ ರಕ್ತದೊತ್ತಡ, ಮಧುಮೇಹ, AMR ಕಣ್ಗಾವಲು, ಝೂನೋಟಿಕ್ ಕಾಯಿಲೆಗಳು ಮತ್ತು ಇತರ ಆರೋಗ್ಯ ಸಮಸ್ಯೆಗಳು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪ್ರಮುಖ ಸಂಶೋಧನೆಗಳನ್ನು ನಡೆಸಿವೆ. ಇದು ಕೇವಲ ಕಟ್ಟಡಗಳಲ್ಲ, ದೇಶವು ತನ್ನ ಆರೋಗ್ಯ ಪರಿಸರ ವ್ಯವಸ್ಥೆಯನ್ನು ಸ್ವಾವಲಂಬಿಯನ್ನಾಗಿ ಮಾಡಲು ಅಗತ್ಯವಿರುವ ಆರೋಗ್ಯದ ದೇವಾಲಯಗಳಾಗಿವೆ”ಎಂದು ಅವರು ಹೇಳಿದರು.
ಭಾರತದ ಆರೋಗ್ಯ ಕ್ಷೇತ್ರವನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಲು ಮತ್ತು ಅದನ್ನು ಸ್ವಾವಲಂಬಿಯಾಗಿಸಲು ಸರ್ಕಾರ ಕೆಲಸ ಮಾಡುತ್ತಿದೆ” ಎಂದ ಅವರು, ಕೋವಿಡ್ ಸಮಯದಲ್ಲಿ ನಾವು ಲಸಿಕೆಯನ್ನು ದೇಶದಲ್ಲಿಯೇ ಅಭಿವೃದ್ಧಿಪಡಿಸಿದ್ದೇವೆ ಮಾತ್ರವಲ್ಲ, ನಾವು ಅತ್ಯುತ್ತಮ ಗುಣಮಟ್ಟದ ಲಸಿಕೆಯನ್ನು ಅಗ್ಗದ ಬೆಲೆಯಲ್ಲಿ ಜಗತ್ತಿಗೆ ಒದಗಿಸಿದ್ದೇವೆ. ಅದೇ ರೀತಿ ಹೈಡ್ರಾಕ್ಸಿ-ಯೂರಿಯಾದಂತಹ ಅಪರೂಪದ ಕಾಯಿಲೆಗಳಿಗೆ 14-15 ಔಷಧಿಗಳಿದ್ದು, ಈ ಹಿಂದೆ ಅದಕ್ಕೆ 10,000 ರೂ ವೆಚ್ಚವಾಗುತ್ತಿತ್ತು. ಇಂದು ಈ ಔಷಧಿಗಳನ್ನು ಭಾರತದಲ್ಲಿ ತಯಾರಿಸಲಾಗುತ್ತದೆ ಮತ್ತು ಹಿಂದಿನ ವೆಚ್ಚದ ಒಂದು ಭಾಗ ಮಾತ್ರ ಈಗ ಅದಕ್ಕೆ ವೆಚ್ಚವಾಗುತ್ತಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.