ನವದೆಹಲಿ: ಋತುಸ್ರಾವವು “ಅಂಗವಿಕಲತೆ” ಅಲ್ಲ ಮತ್ತು ಆದ್ದರಿಂದ “ಋತುಸ್ರಾವದ ವೇಳೆ ಪಾವತಿ ಸಹಿತ ರಜೆ ನೀತಿಯನ್ನು ಸಮರ್ಥಿಸುವುದಿಲ್ಲ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಬುಧವಾರ ಹೇಳಿದ್ದಾರೆ.
ಕಳೆದ ವಾರ, ಕಾಂಗ್ರೆಸ್ ಸಂಸದ ಶಶಿ ತರೂರ್ ಪ್ರಶ್ನೆಗೆ ಪ್ರತಿಕ್ರಿಯಿಸಿದ ಇರಾನಿ, “ಎಲ್ಲಾ ಕೆಲಸದ ಸ್ಥಳಗಳಿಗೆ ಮುಟ್ಟಿನ ಅವಧಿಯಲ್ಲಿ ಪಾವತಿ ಸಹಿತ ರಜೆಯನ್ನು ಕಡ್ಡಾಯಗೊಳಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಪರಿಗಣನೆಯಲ್ಲಿ ಇಲ್ಲ” ಎಂದು ಲೋಕಸಭೆಗೆ ತಿಳಿಸಿದ್ದರು.
ಮಹಿಳೆಯರಿಗೆ ಸಮಾನ ಅವಕಾಶಗಳನ್ನು ನಿರಾಕರಿಸುವ ವಿಚಾರಗಳನ್ನು ಪ್ರಸ್ತಾಪಿಸಬಾರದು ಎಂದಿದ್ದರು.
“ಋತುಸ್ರಾವದ ಮಹಿಳೆಯಾಗಿ, ಋತುಚಕ್ರವು ಅಂಗವೈಕಲ್ಯವಲ್ಲ ಎಂದು ಹೇಳುತ್ತೇನೆ. ಇದು ಮಹಿಳೆಯರ ಜೀವನ ಪಯಣದ ಸಹಜ ಭಾಗವಾಗಿದೆ. ಮುಟ್ಟಾಗದ ಯಾರಾದರೂ ಮುಟ್ಟಿನ ಬಗ್ಗೆ ನಿರ್ದಿಷ್ಟ ದೃಷ್ಟಿಕೋನವನ್ನು ಹೊಂದಿದ್ದಾರೆ ಎಂಬ ಕಾರಣಕ್ಕಾಗಿ ಮಹಿಳೆಯರಿಗೆ ಸಮಾನ ಅವಕಾಶಗಳನ್ನು ನಿರಾಕರಿಸುವ ಸಮಸ್ಯೆಗಳನ್ನು ನಾವು ಪ್ರಸ್ತಾಪಿಸಬಾರದು” ಎಂದಿದ್ದಾರೆ.
“ಮುಟ್ಟಿನ ಅವಧಿಯಲ್ಲಿ ಒಂದು ಸಣ್ಣ ಪ್ರಮಾಣದ ಮಹಿಳೆಯರು / ಹುಡುಗಿಯರು ತೀವ್ರವಾದ ಡಿಸ್ಮೆನೊರಿಯಾ ಅಥವಾ ಅಂತಹುದೇ ದೂರುಗಳಿಂದ ಬಳಲುತ್ತಾರೆ ಮತ್ತು ಈ ಪ್ರಕರಣಗಳಲ್ಲಿ ಹೆಚ್ಚಿನವು ಔಷಧಿಗಳ ಮೂಲಕ ನಿರ್ವಹಿಸಲ್ಪಡುತ್ತವೆ” ಎಂದು ಅವರು ಮೇಲ್ಮನೆಯಲ್ಲಿ ಸಲ್ಲಿಸಿದ ಲಿಖಿತ ಪ್ರತಿಕ್ರಿಯೆಯಲ್ಲಿ ಹೇಳಿದರು.
“ಆದರೆ, ಮುಟ್ಟಿನ ಸಮಸ್ಯೆ ಮತ್ತು ಅದರ ಸಂಬಂಧಿತ ಚಟುವಟಿಕೆಗಳು ಮೌನದಿಂದ ಸುತ್ತುವರೆದಿವೆ, ಅದರ ಪ್ರಸ್ತಾಪ ಅವಮಾನವೆಂದು ಪರಿಗಣಿಸಲಾಗುತ್ತದೆ ಮತ್ತು ಮುಟ್ಟಿನ ಅವಧಿಯಲ್ಲಿ ಸ್ವಾತಂತ್ರ್ಯ ಮತ್ತು ಸಾಮಾನ್ಯ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸುವಂತಹ ಸಾಮಾಜಿಕ ಪಿಡುಗುಗಳು ಇವೆ. ಅನೇಕ ಬಾರಿ ಇವು ಕಿರುಕುಳ ಮತ್ತು ಸಾಮಾಜಿಕ ಬಹಿಷ್ಕಾರಕ್ಕೆ ಕಾರಣವಾಗುತ್ತದೆ. ಮೊದಲ ಬಾರಿಗೆ ಹೆಣ್ಣು ಋತುಮತಿಯಾದಗ ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ಅನುಭವಿಸುವ ಬದಲಾವಣೆಗಳ ಬಗ್ಗೆ ಅರಿವು ಇಲ್ಲದೇ ಹೋದರೆ ಅದು ಹೆಚ್ಚು ಸಂವೇದನಾಶೀಲವಾಗುತ್ತದೆ” ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.