ಬೆಂಗಳೂರು: ರಾಜ್ಯಾದ್ಯಂತ ವಿದ್ಯುತ್ ಕ್ಷಾಮ ಉಂಟಾಗಿದ್ದು, ಈ ಸಮಸ್ಯೆಯನ್ನು ಬಗೆಹರಿಸಲು ಎಲ್ಇಡಿ ಬಲ್ಬ್ಗಳನ್ನು ಕಡ್ಡಾಯವಾಗಿ ಬಳಕೆಗೆ ತರಲು ಸರ್ಕಾರ ಚಿಂತನೆ ನಡೆಸಿದೆ. ಬೀದಿ ದೀಪ, ಕಚೇರಿ ಕಟ್ಟಡಗಳು, ಮನೆಗಳಲ್ಲಿ ಎಲ್ಇಡಿ ಬಲ್ಬ್ಗಳನ್ನು ಬಳಸುವ ಮೂಲಕ ಪ್ರತಿನಿತ್ಯ 800ರಿಂದ 900 ಮೆಗಾವ್ಯಾಟ್ ವಿದ್ಯುತ್ ಉಳಿತಾಯವಾಗಲಿದೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಕಡಿಮೆ ವಿದ್ಯುತ್ ಬಳಕೆಯ ಜೊತೆಗೆ ಹೆಚ್ಚು ಪ್ರಕಾಶಮಾನವಾಗಿರುವ ಎಲ್ಇಡಿ ಬಲ್ಬ್ಗಳ ಮಾರುಕಟ್ಟೆ ಬೆಲೆ ರೂ.400 ಇದ್ದು, 100 ರೂ. ರಿಯಾಯಿತಿ ದರದಲ್ಲಿ ನೀಡುವ ಯೋಜನೆ ಹೊಂದಿದೆ. ಇದಕ್ಕಾಗಿ ಎಲ್ಇಡಿ ಬಲ್ಬ್ ಉತ್ಪಾದಕರ ಸಭೆ ಕರೆಯಲಾಗಿದೆ ಎಂದು ಅವರು ಹೇಳಿದ್ದಾರೆ.
ಸರ್ಕಾರ 1350 ಮೆಗಾವ್ಯಾಟ್ ವಿದ್ಯುತ್ ಖರೀದಿಸಲಿದ್ದು, ಪ್ರಸ್ತುತ 6150 ಮಾತ್ರ ಲಭ್ಯವಿದೆ. ಲಿಂಗನಮಕ್ಕಿ ವಿದ್ಯುತ್ ಉತ್ಪಾದನಾ ಜಲಾಶಯದಲ್ಲಿ ಕಳೆದ ವರ್ಷ ಶೇ.89ರಷ್ಟು ನೀರಿದ್ದು, ಈ ವರ್ಷ ಶೇ. 49ಕ್ಕೆ ಇಳಿದಿದೆ. ಆರ್ಟಿಪಿಎಸ್ನ ೭ನೇ ಘಟಕವು ಸ್ಥಗಿತಗೊಂಡಿದೆ ಎಂದು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.