ಬೆಂಗಳೂರು: ಭಾರತಕ್ಕೆ ನೀರು ಅಥವಾ ಆರ್ಥಿಕ ಸಂಪನ್ಮೂಲಗಳ ಕೊರತೆ ಇಲ್ಲ, ನಮಗೆ ಕೊರತೆಯಿರುವುದು ‘ಸೂಕ್ತ ದೃಷ್ಟಿ’ ಮತ್ತು ಭ್ರಷ್ಟಾಚಾರ ರಹಿತ ವ್ಯಕ್ತಿಗಳು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಹಾಗೂ ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರೊಂದಿಗೆ ಸಮಾಜಸೇವಕ, ಶಿಕ್ಷಣ ತಜ್ಞ ಮತ್ತು ಉದ್ಯಮಿ ಡಾ.ಎಂ.ಎಸ್.ರಾಮಯ್ಯ ಅವರ ಚಿತ್ರಾತ್ಮಕ ಜೀವನಚರಿತ್ರೆ ‘ರಾಮಯ್ಯಣಂ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಎಷ್ಟೋ ವಿದ್ಯಾರ್ಥಿಗಳ ಕನಸನ್ನು ನನಸಾಗಿಸಲು ಪ್ರೇರೇಪಿಸಿ ಸಹಾಯ ಮಾಡಿದ ಡಾ.ರಾಮಯ್ಯ ಮತ್ತು ಬಳಗದ ಕಾರ್ಯವನ್ನು ಶ್ಲಾಘಿಸಿದ ಗಡ್ಕರಿ, ಬೆಂಗಳೂರು ಭಾರತದ ಜ್ಞಾನದ ರಾಜಧಾನಿ ಎಂದು ಕರೆಯಲ್ಪಡುತ್ತದೆ. ವಿವಿಧ ಕ್ಷೇತ್ರಗಳಿಗೆ ಹಲವಾರು ಸಂಸ್ಥೆಗಳನ್ನು ನಿರ್ಮಿಸಿದ ಡಾ ರಾಮಯ್ಯ ಅವರ ಪರಿಶ್ರಮವೂ ಇದಕ್ಕೆ ಕಾರಣ ಎಂದು ಗಡ್ಕರಿ ಹೇಳಿದರು.
ನಾವೀನ್ಯತೆ, ಉದ್ಯಮಶೀಲತೆ, ವಿಜ್ಞಾನ, ತಂತ್ರಜ್ಞಾನ, ಸಂಶೋಧನೆ ಮತ್ತು ಕೌಶಲ್ಯಗಳನ್ನು ಸಾಮಾನ್ಯವಾಗಿ ಜ್ಞಾನ ಮತ್ತು ಸಂಪತ್ತಾಗಿ ಪರಿವರ್ತಿಸುವ ಸಾಮರ್ಥ್ಯ ಎಂದು ಕರೆಯಲಾಗುತ್ತದೆ. ಸೂಕ್ತ ದೃಷ್ಟಿ ಇರುವ ಯಾವುದೇ ವ್ಯಕ್ತಿ ಮತ್ತು ಯಾವುದೇ ವಸ್ತು ಎಂದಿಗೂ ವ್ಯರ್ಥವಾಗುವುದಿಲ್ಲ. ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸವುದು ಭಾರತವು ಆತ್ಮನಿರ್ಭರ ಆಗಲು ಸಹಾಯ ಮಾಡುತ್ತದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.