ನವದೆಹಲಿ: ಅಟಲ್ ಪಿಂಚಣಿ ಯೋಜನೆ (ಎಪಿವೈ) ಅಡಿಯಲ್ಲಿ ಒಟ್ಟು ನೋಂದಣಿ 6 ಕೋಟಿ ದಾಟಿದೆ, ಪ್ರಸಕ್ತ ಹಣಕಾಸು ವರ್ಷದಲ್ಲಿ 79 ಲಕ್ಷಕ್ಕೂ ಹೆಚ್ಚು ನೋಂದಣಿಗಳಾಗಿವೆ ಎಂದು ಹಣಕಾಸು ಸಚಿವಾಲಯ ನಿನ್ನೆ ಪತ್ರಿಕಾ ಪ್ರಕಟಣೆಯಲ್ಲಿ ಪ್ರಕಟಿಸಿದೆ. ಎಲ್ಲಾ ಬ್ಯಾಂಕ್ಗಳ ಅವಿರತ ಪ್ರಯತ್ನದಿಂದ ಸಮಾಜದ ಅತ್ಯಂತ ದುರ್ಬಲ ವರ್ಗಗಳನ್ನು ಪಿಂಚಣಿ ವ್ಯಾಪ್ತಿಗೆ ತರುವ ಸಾಧನೆಯನ್ನು ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಅಟಲ್ ಪಿಂಚಣಿ ಯೋಜನೆ ಭಾರತ ಸರ್ಕಾರದ ಪ್ರಮುಖ ಸಾಮಾಜಿಕ ಭದ್ರತಾ ಯೋಜನೆಯಾಗಿದ್ದು, ಇದನ್ನು 9ನೇ ಮೇ 2015 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ನಾಗರಿಕರಿಗೆ ವೃದ್ಧಾಪ್ಯ ಆದಾಯ ಭದ್ರತೆಯನ್ನು ಒದಗಿಸುವ ಉದ್ದೇಶದೊಂದಿಗೆ ಪ್ರಾರಂಭಿಸಿದರು. ಯೋಜನೆಯು ವಿಶೇಷವಾಗಿ ಬಡವರು, ಹಿಂದುಳಿದವರು ಮತ್ತು ಅಸಂಘಟಿತ ವಲಯಗಳಲ್ಲಿನ ಕಾರ್ಮಿಕರ ಮೇಲೆ ಕೇಂದ್ರೀಕರಿಸಿದೆ.
ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ, ಚಂದಾದಾರರು 60 ವರ್ಷ ವಯಸ್ಸಿನ ಬಳಿಕ 1,000 ರಿಂದ 5,000 ರೂಗಳ ಮಾಸಿಕ ಪಿಂಚಣಿ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಚಂದಾದಾರರ ಮರಣದ ನಂತರ ಅದೇ ಪಿಂಚಣಿಯನ್ನು ಚಂದಾದಾರರ ಸಂಗಾತಿಗೆ ನೀಡಲಾಗುತ್ತದೆ. ಚಂದಾದಾರರ ಮತ್ತು ಸಂಗಾತಿಯ ಮರಣದ ನಂತರ, ಚಂದಾದಾರರ 60 ವರ್ಷದವರೆಗೆ ಸಂಗ್ರಹವಾದ ಪಿಂಚಣಿ ಮೊತ್ತವನ್ನು ನಾಮಿನಿಗೆ ಹಿಂತಿರುಗಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.