ಮುಂಬಯಿ: ಇಂದು ವಿಶ್ವ ಹೃದಯ ದಿನ. ಜನರು ಸಂತೋಷಕರ ಮತ್ತು ಆರೋಗ್ಯಕರ ಜೀವನ ನಡೆಸಲು ತಮ್ಮ ದಿನಚರಿಯಲ್ಲಿ ಹೃದಯ-ಸಂಬಂಧಿ ಪೌಷ್ಠಿಕ ಹಾಗೂ ಆರೋಗ್ಯಕರ ಆಹಾರ ಸೇವಿಸುವುದು ಅಗತ್ಯ.
ಭಾರತದ ಶೇ.60ರಷ್ಟು ಮಹಿಳೆಯರು ಹೃದಯ ಸಂಬಂಧಿ ರೋಗಕ್ಕೆ ತುತ್ತಾಗುತ್ತಿದ್ದಾರೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ. ಅದರಲ್ಲೂ ಮುಂಬಯಿ ನಗರದ 30-45 ವರ್ಷದೊಳಗಿನ ಶೇ.89ರಷ್ಟು ಮಹಿಳೆಯರು ಬೊಜ್ಜು/ ತೂಕ ಹೆಚ್ಚಳದ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಸಫೋಲಾ ಲೈಫ್ ಸಂಶೋಧನೆ 2015ರಿಂದ ತಿಳಿದು ಬಂದಿದೆ.
ಭಾರತೀಯ ಮಹಿಳೆಯರಲ್ಲಿ ಹೃದಯ ಆರೋಗ್ಯದ ಅಪಾಯಗಳ ಅಂಶಗಳನ್ನು ಕಂಡು ಹಿಡಿಯಲಾಗಿದೆ. ಶೇ.80ರಷ್ಟು ಮಹಿಳೆಯರಲ್ಲಿ ಭೌತಿಕ ದ್ರವ್ಯರಾಶಿ ಸೂಚಿಯು ಸಾಮಾನ್ಯ ರೇಖೆಗಿಂತ ಹೆಚ್ಚಿದ್ದು ಹೃದಯ ರೋಗ ಗಂಡಾಂತರಕ್ಕೆ ಸಿಲುಕುತ್ತಿದ್ದಾರೆ. ಇನ್ನು ಶೇ.78ರಷ್ಟು ಹೆಚ್ಚಿದ ಹೊಟ್ಟೆ ಕೊಬ್ಬು ಸಮಸ್ಯೆ ಎದುರಿಸುತ್ತಿದ್ದಾರೆ.
ಮುಂಬಯಿಯ ಶೇ. 86ರಷ್ಟು ಮಹಿಳೆಯರು ವಾರದಲ್ಲಿ 3 ಬಾರಿಯಂತೆ ಸಂರಕ್ಷಿಸಲಾದ ಆಹಾರವನ್ನು ಸೇವಿಸುವುದರಿಂದ ಹೃದಯ ಸಂಬಂಧಿ ರೋಗಗಳ ಅಪಾಯ ಕಾಣಿಸುತ್ತದೆ. ಕೊಬ್ಬು ಭರಿತ ಆಹಾರ ಮತ್ತು ಕರಿದ ಆಹಾರಗಳನ್ನು ವಾರದಲ್ಲಿ 2-3 ಬಾರಿ ಸೇವಿಸುವುದು ಇದಕ್ಕೆ ಕಾರಣ ಎನ್ನಲಾಗಿದೆ.
ರಾಷ್ಟ್ರದ 10 ಮೆಟ್ರೋ ಹಾಗೂ ಸಾಮಾನ್ಯ ನಗರಗಳಲ್ಲಿ 1,299 ಮಹಿಳೆಯರ ಮೇಲೆ ಈ ಸಂಶೋಧನೆ ನಡೆಸಲಾಗಿತ್ತು. ಸಾಮಾನ್ಯ ಮಟ್ಟಕ್ಕಿಂತ ಹೆಚ್ಚು ಭೌತಿಕ ದ್ರವ್ಯರಾಶಿ ಸೂಚಿ ಹೊಂದಿರುವ ಮಹಿಳೆಯರ ಅನಾರೋಗ್ಯಕರ ಆಹಾರ ಪದ್ಧತಿ, ಧೂಮಪಾನ, ಕಡಿಮೆ ಮಟ್ಟದ ದೈಹಿಕ ಚಟುವಟಿಕೆಯಿಂದಾಗಿ ಹೃದಯ ಸಂಬಂಧಿ ರೋಗಗಳ ಪ್ರಮಾಣ ಹೆಚ್ಚುತ್ತಿದೆ ಎಂದು ಹೋಲಿ ಫ್ಯಾಮಿಲಿ ಆಸ್ಪತ್ರೆಯ ಡಾ. ಬ್ರೈನ್ ಪಿಂಟೋ ಅಭಿಪ್ರಾಯಪಟ್ಟಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.