ವಾಷಿಂಗ್ಟನ್ ಡಿಸಿ: ಭಾರತೀಯ ಸಾಮಾಜಿಕ ಕಾರ್ಯಕರ್ತ ನಿಖಿಲ್ ಡೇ ಅವರನ್ನು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಅಂತರರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ಚಾಂಪಿಯನ್ ಎಂದು ಹೆಸರಿಸಿದೆ.
ಭಾರತದಲ್ಲಿ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಎದುರಿಸಲು ಪಾರದರ್ಶಕತೆ ಮತ್ತು ಹೊಣೆಗಾರಿಕೆ, ಸಾರ್ವಜನಿಕ ಲೆಕ್ಕಪರಿಶೋಧನೆ ಮತ್ತು ಭಾಗಿಧಾರಿ ಪ್ರಜಾಪ್ರಭುತ್ವದ ಗುರಿಯನ್ನು ಹೊಂದಿರುವ ಸಾಮಾಜಿಕ ಚಳುವಳಿಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ಡೇ ಅವರನ್ನು ಭ್ರಷ್ಟಾಚಾರ ವಿರೋಧಿ ಚಾಂಪಿಯನ್ ಎಂದು ಗುರುತಿಸಲಾಗಿದೆ ಎಂದು ಯುಎಸ್ ಬ್ಯೂರೋ ಆಫ್ ಇಂಟರ್ನ್ಯಾಷನಲ್ ನಾರ್ಕೋಟಿಕ್ಸ್ ಆಂಡ್ ಲಾ ಎನ್ಫೋರ್ಸ್ಮೆಂಟ್ ಅಫೇರ್ಸ್ ಹೇಳಿದೆ.
ಮಜ್ದೂರ್ ಕಿಸಾನ್ ಶಕ್ತಿ ಸಂಘಟನೆಯ (MKSS) ಸಹ-ಸಂಸ್ಥಾಪಕರಾದ ಡೇ ಅವರ ಕೆಲಸವು ಭಾರತದಲ್ಲಿ ಪಾರದರ್ಶಕತೆ ಮತ್ತು ಭ್ರಷ್ಟಾಚಾರ ವಿರೋಧಿ ಸುಧಾರಣೆಗಳಿಗೆ ಕಾರಣವಾಯಿತು. ಮುಖ್ಯವಾಗಿ ರಾಜಸ್ಥಾನದಲ್ಲಿ ಅವರ ಕಾರ್ಯ ಹೆಚ್ಚು ಪ್ರಭಾವ ಬೀರಿದೆ.
ಮಜ್ದೂರ್ ಕಿಸಾನ್ ಶಕ್ತಿ ಸಂಘಟನೆ, ಮಧ್ಯ ರಾಜಸ್ಥಾನದ ಹಳ್ಳಿಗಳಲ್ಲಿ ಕಾರ್ಮಿಕರು ಮತ್ತು ರೈತರೊಂದಿಗೆ ಕೆಲಸ ಮಾಡುವ ಜನರ ಸಂಘಟನೆಯಾಗಿದೆ. ಸಾಮಾನ್ಯ ನಾಗರಿಕರು ತಮ್ಮ ಜೀವನವನ್ನು ಘನತೆ ಮತ್ತು ನ್ಯಾಯಯುತವಾಗಿ ಬದುಕಲು, ಭಾಗಿಧಾರಿ ಪ್ರಜಾಪ್ರಭುತ್ವ ಪ್ರಕ್ರಿಯೆಗಳನ್ನು ಬಲಪಡಿಸಲು 1990 ರಲ್ಲಿ ಪ್ರದೇಶದ ಜನರು ಒಂದಾಗಿ ಈ ಸಂಘಟನೆಯನ್ನು ಸ್ಥಾಪಿಸಿದರು. ಭೂಮಾಲೀಕರು ಅಕ್ರಮವಾಗಿ ಹೊಂದಿದ್ದ ಸಮುದಾಯದ ಭೂಮಿಗಾಗಿ ನಡೆದ ಹೋರಾಟದಿಂದ ಈ ಸಂಘಟನೆ ಹುಟ್ಟಿಕೊಂಡಿದೆ.
ಭಾರತದಲ್ಲಿನ ಯುಎಸ್ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರು ‘X’ ನಲ್ಲಿ ಟ್ವಿಟ್ ಮಾಡಿ “ಸ್ಟೇಟ್ ಡಿಪಾರ್ಟ್ಮೆಂಟ್ನಿಂದ ಅಂತರರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ಚಾಂಪಿಯನ್ ಎಂದು ಹೆಸರಿಸಲ್ಪಟ್ಟಿದ್ದಕ್ಕಾಗಿ ಮಜ್ದೂರ್ ಕಿಸಾನ್ ಶಕ್ತಿ ಸಂಘಟನೆಯ ಸ್ಥಾಪಕ ಸದಸ್ಯ ನಿಖಿಲ್ ಡೇ ಅವರಿಗೆ ಅಭಿನಂದನೆಗಳು” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.