ನವದೆಹಲಿ: 2028 ರಲ್ಲಿ COP33 ಶೃಂಗಸಭೆಯನ್ನು ಆಯೋಜಿಸಲು ಭಾರತ ಪ್ರಯತ್ನಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆಯ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಭಾರತದ ಯುಎಇ ರಾಯಭಾರಿ ಅಬ್ದುಲ್ನಾಸರ್ ಅಲ್ಶಾಲಿ ಅವರು, ಭಾರತದ ಸಾಂಸ್ಥಿಕ ಸಾಮರ್ಥ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ, ಭಾರತವು ಇದನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಪ್ರತಿಪಾದಿಸಿದ್ದಾರೆ.
ಎಎನ್ಐಗೆ ನೀಡಿದ ಸಂದರ್ಶನದಲ್ಲಿ, ರಾಯಭಾರಿ ಅಲ್ಶಾಲಿ ಅವರು, ಜಿ 20 ಸಭೆಗಳು ಮತ್ತು ಶೃಂಗಸಭೆಗಳ ಮೂಲಕ ಭಾರತವು ಪರಿಣಾಮಕಾರಿ ನಿರ್ವಹಣೆಯ ಸಾಮರ್ಥ್ಯವನ್ನು ಸಾಬೀತುಪಡಿಸಿದೆ ಎಂದಿದ್ದಾರೆ. ಭಾರತದ ನಿರ್ವಹಣೆಯಿಂದ ನಾವು ಕಲಿತಿದ್ದೇವೆ ಎಂದಿದ್ದಾರೆ
“ಭಾರತವು G20 ಸಭೆಗಳು ಮತ್ತು ಶೃಂಗಸಭೆಯನ್ನು ಹೇಗೆ ನಿರ್ವಹಿಸಿದೆ ಎಂಬುದನ್ನು ನೋಡಿದ್ದೇವೆ, ನಾವು COP28 ತಂಡದ ಸದಸ್ಯರನ್ನು ಸ್ವಾಗತಿಸುವ ಸಂದರ್ಭದಲ್ಲಿ ಭಾರತದ ನಿರ್ವಹಣೆಯಿಂದ ಕಲಿತಿದ್ದೇವೆ” ಎಂದು ಅಲ್ಶಾಲಿ ಹೇಳಿದ್ದಾರೆ.
2028 ರಲ್ಲಿ COP33 ಶೃಂಗಸಭೆಯನ್ನು ಯಶಸ್ವಿಯಾಗಿ ಭಾರತ ಆಯೋಜಿಸಬಲ್ಲದು ಎಂಬ ಬಗ್ಗೆ ನನಗೆ ಖಾತ್ರಿ ಇದೆ ಎಂದಿದ್ದಾರೆ.
ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ನಡೆದ ಕಾನ್ಫರೆನ್ಸ್ ಆಫ್ ಪಾರ್ಟಿಟೀಸ್-28 (COP28) ನ ವಿಶ್ವ ಹವಾಮಾನ ಕ್ರಿಯೆ ಶೃಂಗಸಭೆಯಲ್ಲಿ ಭಾಗವಹಿಸಿದ ಜಾಗತಿಕ ನಾಯಕರಲ್ಲಿ ಪ್ರಧಾನಿ ಮೋದಿ ಕೂಡ ಸೇರಿದ್ದಾರೆ.
COP28 ನ ಉನ್ನತ ಮಟ್ಟದ ವಿಭಾಗದ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಹವಾಮಾನ ಬದಲಾವಣೆಯನ್ನು ಎದುರಿಸುವ ಪ್ರಯತ್ನಗಳ ಭಾಗವಾಗಿ ಉದ್ದೇಶಿತ ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆಯನ್ನು (NDC) ಪೂರೈಸುವ ಕೆಲವು ದೇಶಗಳಲ್ಲಿ ಭಾರತವೂ ಸೇರಿದೆ ಎಂದು ಹೇಳಿದರು ಮತ್ತು ದೇಶವು COP33 2028 ಅನ್ನು ಆಯೋಜಿಸಲು ಬಿಡ್ ಮಾಡಲಿದೆ ಎಂದು ಪ್ರಸ್ತಾಪಿಸಿದರು.
“ಭಾರತವು ಹವಾಮಾನ ಬದಲಾವಣೆ ಪ್ರಕ್ರಿಯೆಗಾಗಿ ಯುಎನ್ ಫ್ರೇಮ್ವರ್ಕ್ಗೆ ಬದ್ಧವಾಗಿದೆ. ಅದಕ್ಕಾಗಿಯೇ, ಈ ಹಂತದಿಂದ, 2028 ರಲ್ಲಿ ಭಾರತದಲ್ಲಿ COP33 ಶೃಂಗಸಭೆಯನ್ನು ಆಯೋಜಿಸಲು ನಾನು ಪ್ರಸ್ತಾಪಿಸುತ್ತೇನೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.