ನವದೆಹಲಿ: ಇಂದು ಡಿಜಿಟಲ್ ವೇದಿಕೆಯಲ್ಲಿ ಭಾರತವು ವೇಗವಾಗಿ ಬೆಳವಣಿಗೆಯ ಹಾದಿಯಲ್ಲಿದೆ ಮತ್ತು 850 ಮಿಲಿಯನ್ ಭಾರತೀಯರು ಇಂಟರ್ನೆಟ್ ಬಳಸುತ್ತಿದ್ದಾರೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಹೇಳಿದ್ದಾರೆ.
ನವದೆಹಲಿಯಲ್ಲಿ ಭಾರತ ಇಂಟರ್ನೆಟ್ ಆಡಳಿತ ವೇದಿಕೆ 2023 ರ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಚಂದ್ರಶೇಖರ್, 2025-26 ರಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ 1.2 ಬಿಲಿಯನ್ ತಲುಪುವ ನಿರೀಕ್ಷೆಯಿದೆ. ಶಿಕ್ಷಣ, ಕೌಶಲ ಸೇರಿದಂತೆ ಎಲ್ಲಾ ರೀತಿಯ ದೈನಂದಿನ ಚಟುವಟಿಕೆಗಳಿಗೆ ಜನರು ಅಂತರ್ಜಾಲವನ್ನು ಬಳಸುತ್ತಿದ್ದಾರೆ ಎಂದರು.
ಇ-ಪ್ಲಾಟ್ಫಾರ್ಮ್ಗಳನ್ನು ಬಳಸುವ ಗ್ರಾಹಕರ ಸುರಕ್ಷತೆ ಮತ್ತು ವಿಶ್ವಾಸವು ಅತಿಮುಖ್ಯವಾಗಿದೆ. ಆನ್ಲೈನ್ನಲ್ಲಿ ಸೇವೆಗಳು ಮತ್ತು ಉತ್ಪನ್ನಗಳನ್ನು ತಲುಪಿಸುವ ವೇದಿಕೆಗಳು ಕಾನೂನುಬದ್ಧವಾಗಿ ಜವಾಬ್ದಾರರಾಗಿರಬೇಕು ಎಂದು ಅವರು ಹೇಳಿದರು.
ಇಂಡಿಯಾ ಇಂಟರ್ನೆಟ್ ಗವರ್ನೆನ್ಸ್ ಫೋರಮ್ ಬಹು-ಸ್ಟೇಕ್ಹೋಲ್ಡರ್ ವೇದಿಕೆಯಾಗಿದ್ದು, ಇಂಟರ್ನೆಟ್ಗೆ ಸಂಬಂಧಿಸಿದ ಸಾರ್ವಜನಿಕ ನೀತಿ ಸಮಸ್ಯೆಗಳನ್ನು ಚರ್ಚಿಸಲು ವಿವಿಧ ಗುಂಪುಗಳ ಪ್ರತಿನಿಧಿಗಳನ್ನು ಒಟ್ಟುಗೂಡಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.