ಐಝ್ವಾಲ್: ಮಿಜೋರಾಂನಲ್ಲಿ 40 ವಿಧಾನಸಭಾ ಕ್ಷೇತ್ರಗಳ ಪೈಕಿ 27 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಜೋರಾಮ್ ಪೀಪಲ್ಸ್ ಮೂವ್ಮೆಂಟ್ (ZPM) ವಿಜಯಶಾಲಿಯಾಗಿ ಹೊರಹೊಮ್ಮಿದೆ. ಮಿಜೋರಾಂನ ಮುಂದಿನ ಮುಖ್ಯಮಂತ್ರಿಯಾಗಿ ಡಿ.8ರಂದು ಪ್ರಮಾಣ ವಚನ ಸ್ವೀಕರಿಸಲು ZPM ಮುಖ್ಯಸ್ಥ ಲಾಲ್ದುಹೋಮ ಅವರು ಸಜ್ಜಾಗಿದ್ದಾರೆ.
ZPM ಚುನಾವಣೆಯಲ್ಲಿ 27 ಸ್ಥಾನಗಳನ್ನು ಗೆದ್ದಿದ್ದರೆ, ಮಿಜೋ ನ್ಯಾಷನಲ್ ಫ್ರಂಟ್ 10 ಸ್ಥಾನಗಳನ್ನು ಗೆದ್ದಿದೆ, ಬಿಜೆಪಿ ಎರಡು ಸ್ಥಾನಗಳನ್ನು ಮತ್ತು ಕಾಂಗ್ರೆಸ್ ಒಂದನ್ನು ಗೆದ್ದಿದೆ. ZPM ಮುಖ್ಯಮಂತ್ರಿ ಅಭ್ಯರ್ಥಿ ಲಾಲ್ದುಹೋಮ ಅವರು ಸೆರ್ಚಿಪ್ ಸ್ಥಾನದಿಂದ ಮಿಜೋ ನ್ಯಾಷನಲ್ ಫ್ರಂಟ್ನ ಜೆ ಮಲ್ಸಾವ್ಮ್ಜುವಾಲಾ ವಂಚೌಂಗ್ ವಿರುದ್ಧ 8,314 ಮತಗಳಿಂದ ಗೆಲುವು ಸಾಧಿಸಿದ್ದಾರೆ.
ಪ್ರಮಾಣ ವಚನ ಸ್ವೀಕರಿಸಿದ ನಂತರ ಮುಂದಿನ 100 ದಿನಗಳ ಕಾಲ ನಮ್ಮ ಆದ್ಯತೆಯ ಯೋಜನೆಗಳನ್ನು ಘೋಷಿಸಲಿದ್ದೇವೆ ಎಂದು ಲಾಲ್ದುಹೋಮ ಹೇಳಿದ್ದಾರೆ. “ಮಿಜೋರಾಂ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ ಮತ್ತು ಆರ್ಥಿಕ ಸ್ಥಿತಿ ತುಂಬಾ ಕೆಟ್ಟದಾಗಿದೆ. ಹೊರಹೋಗುತ್ತಿರುವ ಸರ್ಕಾರದಿಂದ ಇದು ನಮಗೆ ಬಳುವಳಿಯಾಗಿ ದೊರೆತಿದೆ. ಆದರೂ ನಾವು ನಮ್ಮ ಆದ್ಯತೆಗಳತ್ತ ಗಮನಹರಿಸುತ್ತೇವೆ” ಎಂದಿದ್ದಾರೆ.
ಲಾಲ್ದುಹೋಮ ಅವರು ನಾವು ರೈತರ ಸ್ನೇಹಿತರಾಗಿದ್ದು, ಅವರಿಗೆ ಹೆಚ್ಚಿನ ಆದ್ಯತೆ ನೀಡಲಿದ್ದೇವೆ ಎಂದು ಒತ್ತಿ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.