ನವದೆಹಲಿ : ಖಲಿಸ್ತಾನ್ ಸಿದ್ಧಾಂತದ ವಿರುದ್ಧ ಮಾತನಾಡಿದ ನ್ಯೂಜಿಲ್ಯಾಂಡ್ ಆಕ್ಲೆಂಡ್ನ ಜನಪ್ರಿಯ ಸಿಖ್ ರೇಡಿಯೊ ನಿರೂಪಕನನ್ನು ಡಿಸೆಂಬರ್ 23ರಂದು ಧಾರ್ಮಿಕ ಉಗ್ರಗಾಮಿಗಳ ಗುಂಪೊಂದು ಕ್ರೂರವಾಗಿ ಇರಿದಿತ್ತು. ರೇಡಿಯೋ ನಿರೂಪಕ ಹರ್ನೆಕ್ ಸಿಂಗ್ ಅವರು ಅನೇಕ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿ ಬದುಕುಳಿದಿದ್ದಾರೆ.
ಆಸ್ಟ್ರೇಲಿಯಾ ಟುಡೆ ವೆಬ್ಸೈಟ್ ಪ್ರಕಾರ, ಅವರಿಗೆ 40 ಕ್ಕೂ ಹೆಚ್ಚು ಇರಿತದ ಗಾಯಗಳಾಗಿವೆ. ಅವರ ಕೊಲೆ ಯತ್ನ ಪ್ರಕರಣದಲ್ಲಿ ಮೂವರು ಭಾರತೀಯ ಮೂಲದ ವ್ಯಕ್ತಿಗಳಿಗೆ ಶಿಕ್ಷೆ ವಿಧಿಸಲಾಗಿದೆ. 27 ವರ್ಷದ ಸರ್ವಜೀತ್ ಸಿಧು ಕೊಲೆ ಯತ್ನವನ್ನು ಒಪ್ಪಿಕೊಂಡಿದ್ದಾನೆ. 44 ವರ್ಷದ ಸುಖ್ಪ್ರೀತ್ ಸಿಂಗ್ ಅವನಿಗೆ ಸಹಾಯ ಮಾಡಿದ್ದಾನೆ. ಮೂರನೇ ವ್ಯಕ್ತಿ 48 ವರ್ಷದ ಆಕ್ಲೆಂಡ್ ನಿವಾಸಿ ದಾಳಿಯ ಹಿಂದಿನ ಮಾಸ್ಟರ್ಮೈಂಡ್ ಎನ್ನಲಾಗಿದೆ. ಈ ಅಪರಾಧಕ್ಕಾಗಿ ಅವರಿಗೆ ದೀರ್ಘಾವಧಿಯ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.
ನವೆಂಬರ್ 28 ರಂದು ನಡೆದ ವಿಚಾರಣೆಯಲ್ಲಿ, ನ್ಯಾಯಾಧೀಶರು ಪ್ರಕರಣವು ಅತ್ಯಂತ ಅಸಾಮಾನ್ಯವಾಗಿದೆ ಮತ್ತು ಸಮುದಾಯ ರಕ್ಷಣೆಯ ಅಗತ್ಯವಿದೆ ಎಂದು ಹೇಳಿದ್ದಾರೆ.
“ಇದು ಧಾರ್ಮಿಕ ಮತಾಂಧತೆಯ ಎಲ್ಲಾ ಗುರುತುಗಳನ್ನೂ ಹೊಂದಿದೆ. ಈ ಪ್ರಕರಣದಲ್ಲಿ ಶಿಕ್ಷೆ ವಿಧಿಸಲು ವಿಭಿನ್ನ ಮಾರ್ಗದ ಅಗತ್ಯವಿದೆ. ಹೆಚ್ಚಿನ ಹಿಂಸಾಚಾರದಿಂದ ಸಮುದಾಯವನ್ನು ರಕ್ಷಿಸಲು ಮಹತ್ವ ನೀಡುವುದು ಅಗತ್ಯ. ಹಾಗೆಯೇ ಇತರರಿಗೆ ಅದಕ್ಕೆ ಪ್ರತಿರೋಧದ ಕಠಿಣ ಉತ್ತರ ನೀಡುವುದು ಸಹ ಅವಶ್ಯಕವಾಗಿದೆ” ಎಂದು ನ್ಯಾಯಾಧೀಶ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.