ಟೆಲ್ ಅವಿವ್: ಇಸ್ರೇಲ್-ಹಮಾಸ್ ಕದನ ವಿರಾಮದ ಮೊದಲ ದಿನದಂದು, ಹಮಾಸ್ ವಶದಲ್ಲಿದ್ದ ಒಟ್ಟು 24 ಒತ್ತೆಯಾಳುಗಳನ್ನು ಶುಕ್ರವಾರ ಗಾಜಾದಿಂದ ಬಿಡುಗಡೆ ಮಾಡಲಾಗಿದೆ. ಉಗ್ರಗಾಮಿ ಗುಂಪು ಬಿಡುಗಡೆ ಮಾಡಿದ ಒತ್ತೆಯಾಳುಗಳ ಮೊದಲ ಬ್ಯಾಚ್ನಲ್ಲಿ 13 ಇಸ್ರೇಲಿಗಳು, 10 ಥಾಯ್ ಪ್ರಜೆಗಳು ಮತ್ತು ಒಬ್ಬ ಫಿಲಿಪೈನ್ ಪ್ರಜೆ ಸೇರಿದ್ದಾರೆ.
ಅಕ್ಟೋಬರ್ 7ರಂದು ಅಪಹರಿಸಲ್ಪಟ್ಟ 12 ಥಾಯ್ ಪ್ರಜೆಗ ಪೈಕಿ 10 ಮಂದಿಯನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಒಂಬತ್ತು ಪುರುಷರು ಮತ್ತು ಒಬ್ಬ ಮಹಿಳೆ ಇದ್ದಾರೆ ಎಂದು ಥಾಯ್ಲೆಂಡ್ ವಿದೇಶಾಂಗ ಸಚಿವಾಲಯ ಖಚಿತಪಡಿಸಿದೆ.
ಟೆಲ್ ಅವಿವ್ನಲ್ಲಿರುವ ಥಾಯ್ ರಾಯಭಾರ ಕಚೇರಿಯಿಂದ ಈ ಅಂಕಿ ಅಂಶ ಬಂದಿದೆ ಎಂದು ಥಾಯ್ಲೆಂಡ್ನ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಹಮಾಸ್ನಿಂದ ಬಿಡುಗಡೆಯಾದ ಒತ್ತೆಯಾಳುಗಳನ್ನು ಅಂತರರಾಷ್ಟ್ರೀಯ ರೆಡ್ಕ್ರಾಸ್ಗೆ ವರ್ಗಾಯಿಸಲಾಗಿದೆ. ಮತ್ತೊಂದೆಡೆ, ವಿವಿಧ ಆರೋಪಗಳ ಮೇಲೆ ಬಂಧಿತರಾಗಿದ್ದ 39 ಪ್ಯಾಲೇಸ್ಟಿನಿಯನ್ ಮಹಿಳೆಯರು ಮತ್ತು ಅಪ್ರಾಪ್ತ ವಯಸ್ಕರನ್ನು ಸಹ ಕತಾರ್ ಮಧ್ಯಸ್ಥಿಕೆಯ ಒಪ್ಪಂದದ ಅಡಿಯಲ್ಲಿ ಬಿಡುಗಡೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ 100 ಕ್ಕೂ ಹೆಚ್ಚು ಪ್ಯಾಲೇಸ್ಟಿನಿಯನ್ ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತದೆ ಎನ್ನಲಾಗಿದೆ.
ಶನಿವಾರ ಹಮಾಸ್ ಬಿಡುಗಡೆ ಮಾಡಲಿರುವ ಒತ್ತೆಯಾಳುಗಳ ಹೊಸ ಪಟ್ಟಿಯನ್ನು ಸ್ವೀಕರಿಸಿರುವುದಾಗಿ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ತಿಳಿಸಿದೆ. ಹೆಚ್ಚಿನ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದರೆ ಕದನ ವಿರಾಮವನ್ನು ವಿಸ್ತರಿಸಬಹುದು ಎಂದು ಅವರು ಹೇಳಿದ್ದಾರೆ. ಒಪ್ಪಂದದ ಅಡಿಯಲ್ಲಿ, ಹಮಾಸ್ ಕನಿಷ್ಠ 50 ಒತ್ತೆಯಾಳುಗಳನ್ನು ಮತ್ತು ಇಸ್ರೇಲ್ 150 ಪ್ಯಾಲೆಸ್ತೀನ್ ಕೈದಿಗಳನ್ನು ನಾಲ್ಕು ದಿನಗಳಲ್ಲಿ ಬಿಡುಗಡೆ ಮಾಡುತ್ತದೆ. ಎರಡೂ ಕಡೆಯವರು ಮಹಿಳೆಯರು ಮತ್ತು ಮಕ್ಕಳ ಬಿಡುಗಡೆಗೆ ಆದ್ಯತೆ ನೀಡಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.