ಟೆಲ್ ಅವಿವ್: ಇಸ್ರೇಲ್ ಮತ್ತು ಹಮಾಸ್ ನಡುವಿನ ತಾತ್ಕಾಲಿಕ ಕದನ ವಿರಾಮವು ಇಂದು ಪ್ರಾರಂಭವಾಗಲಿದೆ. ಗಾಜಾ ಪಟ್ಟಿಯಲ್ಲಿ ಯುದ್ಧವು 49 ನೇ ದಿನಕ್ಕೆ ಕಾಲಿಟ್ಟಿದೆ. ನಾಲ್ಕು ದಿನಗಳ ಕದನ ವಿರಾಮಕ್ಕೆ ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ. ಇದರಡಿ ಇಂದು ನಾಗರಿಕ ಒತ್ತೆಯಾಳುಗಳು ಮತ್ತು ಪ್ಯಾಲೇಸ್ಟಿನಿಯನ್ ಕೈದಿಗಳನ್ನು ಮಧ್ಯಾಹ್ನದ ನಂತರ ಬಿಡುಗಡೆ ಮಾಡಲಾಗುತ್ತದೆ.
ಅಕ್ಟೋಬರ್ 7ರಂದು ಹಮಾಸ್ ನಡೆಸಿದ ದಾಳಿಗೆ ಸಾವಿರಾರು ಇಸ್ರೇಲಿಗಳು ಕೊಲ್ಲಲ್ಪಟ್ಟ ನಂತರ ಯುದ್ಧ ಪ್ರಾರಂಬವಾಗಿದೆ. ಸುಮಾರು 2,500 ಭಯೋತ್ಪಾದಕರು ಅಕ್ಟೋಬರ್ 7 ರಂದು ಗಾಜಾ ಪಟ್ಟಿಯಿಂದ ಇಸ್ರೇಲ್ ಗಡಿಯನ್ನು ಭೇದಿಸಿದರು ಮತ್ತು ಸುಮಾರು 240 ಒತ್ತೆಯಾಳುಗಳನ್ನು ವಶಪಡಿಸಿಕೊಂಡರು. ಅಂದಿನಿಂದ ಇಸ್ರೇಲ್ ರಕ್ಷಣಾ ಪಡೆಗಳು ಗಾಜಾದ ಪ್ರದೇಶದಿಂದ ಹಮಾಸ್ ಅನ್ನು ನಿರ್ಮೂಲನೆ ಮಾಡಲು ಗಾಜಾದ ಮೇಲೆ ದಾಳಿಯನ್ನು ಪ್ರಾರಂಭಿಸಿದೆ.
ಇತ್ತೀಚಿಗಷ್ಟೇ ಉಭಯ ಪಡೆಗಳು ತಾತ್ಕಾಲಿಕ ಕದನವಿರಾಮ ಒಪ್ಪಂದಕ್ಕೆ ಬಂದಿವೆ. ಇದರನ್ವಯ ಹಮಾಸ್ 50 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಿದೆ. ಇಸ್ರೇಲ್ ಪ್ಯಾಲೇಸ್ತೇನ್ ಕೈದಿಗಳನ್ನು ಬಿಡುಗಡೆ ಮಾಡಲಿದೆ. ಇಂದಿನಿಂದ ಕದನವಿರಾಮ ನಾಲ್ಕು ದಿನಗಳ ಕಾಲ ಅಸ್ತಿತ್ವದಲ್ಲಿ ಇರಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.