ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಕೇಸರಿಗೆ ಭೌಗೋಳಿಕ ಸೂಚನೆ (ಜಿಐ) ಟ್ಯಾಗ್ ಅನ್ನು ನೀಡಲಾಗಿದೆ. ಭೌಗೋಳಿಕ ಸೂಚಕಗಳ ನೋಂದಣಿ ವತಿಯಿಂದ ಟ್ಯಾಗ್ ನೀಡಲಾಗಿದೆ.
ಕಾಶ್ಮೀರದ ಕೆಲವು ಭಾಗಗಳೊಂದಿಗೆ ಜಮ್ಮುವಿನ ಕಿಶ್ತ್ವಾರ್ ಪ್ರದೇಶದ ಕೆಲವು ಭಾಗಗಳಲ್ಲೂ ಕೇಸರಿಯನ್ನು ಬೆಳೆಯಲಾಗುತ್ತದೆ. ಕುಂಕುಮ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಕೇಸರಿಯು ಅತ್ಯಂತ ದುಬಾರಿಯಾಗಿದ್ದು, ಜಮ್ಮುವಿನ ಪ್ರತ್ಯೇಕವಾದ ಪರ್ವತ ಪ್ರದೇಶವಾದ ಕಿಶ್ತ್ವಾರ್ನಲ್ಲಿ ಇದು ಪ್ರಮುಖ ಬೆಳೆಯಾಗಿದೆ. ಕೇಸರಿ ಕೃಷಿಯು ತಾಜಾತನ ಮತ್ತು ಶುದ್ಧತೆಯನ್ನು ಪ್ರತಿನಿಧಿಸುವ ಸಾಂಸ್ಕೃತಿಕ ಪರಂಪರೆಯಾಗಿದೆ.
ಕಿಶ್ತ್ವಾರ್ನ ಕೇಸರಿ ಉತ್ಪಾದನಾ ಪ್ರದೇಶವನ್ನು ಸ್ಥಳೀಯವಾಗಿ ಮಂಡಲ್ ಎಂದು ಕರೆಯಲಾಗುತ್ತದೆ.
ಕಿಶ್ತ್ವಾರ್ ಡೆಪ್ಯೂಟಿ ಕಮಿಷನರ್ ಡಾ ದೇವಾಂಶ್ ಯಾದವ್ ಅವರು ಪ್ರಮಾಣಪತ್ರದ ಚಿತ್ರದೊಂದಿಗೆ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ಜಿಐ ಟ್ಯಾಗ್ ದೊರೆತಿರುವ ಸಂಸತಸವನ್ನು ಹಂಚಿಕೊಂಡಿದ್ದಾರೆ.
“ಕಿಶ್ತ್ವಾರ್ ಕೇಸರಿ ಬ್ರ್ಯಾಂಡ್ಗೆ ಮೊದಲ ಬಾರಿಗೆ GI ಟ್ಯಾಗ್ ದೊರೆತಿದೆ. ಕಾಶ್ಮೀರಿ ಕೇಸರಿ ಜೊತೆಗೆ ಟ್ಯಾಗ್ ಮಾಡಲಾಗಿದೆ – ಬಹು FPO ಬ್ರ್ಯಾಂಡ್ಗಳು ಇನ್ನು ಮುಂದೆ ನಮ್ಮ ಬಳಿ ಬರಲಿವೆ!! ಗ್ರೇಡ್ 1 ಎಂದು ಪ್ರಮಾಣೀಕರಿಸಲಾಗಿದೆ” ಎಂದು ಪೋಸ್ಟ್ ಮಾಡಿದ್ದಾರೆ.
Kishtwar Saffron brand gets GI tagged for the first time…
Tagged along with Kashmiri saffron – multiple FPO brands coming up now!!
Icing on the cake – certified as grade1✌🏽@OfficeOfLGJandK @Divcomjammu #Kishtwar #Saffron pic.twitter.com/zWUpxRy5y2
— Devansh Yadav (@Devansh_IAS) November 21, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.