ನವದೆಹಲಿ: ವಿದೇಶಿ ಧನಸಹಾಯ ಕಾನೂನುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ರೂ. 9,000 ಕೋಟಿ ಪಾವತಿಸುವಂತೆ ಜಾರಿ ನಿರ್ದೇಶನಾಲಯ (ಇಡಿ) ಎಡ್ಟೆಕ್ ಮೇಜರ್ ಬೈಜುಸ್ಗೆ ನೋಟಿಸ್ ಜಾರಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ED ಯ ಮೂಲಗಳ ಪ್ರಕಾರ, ಬೈಜು 2011 ಮತ್ತು 2023 ರ ನಡುವೆ ಸುಮಾರು ರೂ 28,000 ಕೋಟಿ ವಿದೇಶಿ ನೇರ ಹೂಡಿಕೆಯನ್ನು (ಎಫ್ಡಿಐ) ಸ್ವೀಕರಿಸಿದೆ. ಬೈಜೂಸ್ ಇದೇ ಅವಧಿಯಲ್ಲಿ ವಿದೇ ಅವಧಿಯಲ್ಲಿ ಸಾಗರೋತ್ತರ ನೇರ ಬಂಡವಾಳದ ಹೆಸರಿನಲ್ಲಿ ಸುಮಾರು 9,754 ಕೋಟಿ ಹಣವನ್ನು ರವಾನಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಆದರೆ ಬೈಜೂಸ್ ಮಾತ್ರ ತನಗೆ ಜಾರಿ ನಿರ್ದೇಶನಾಲಯದಿಂದ ನೊಟೀಸ್ ಬಂದಿರುವುದನ್ನು ನಿರಾಕರಿಸಿದೆ.
ಬೈಜು ಪೋಷಕ ಕಂಪನಿ, ಥಿಂಕ್ ಆಂಡ್ ಲರ್ನ್ ಪ್ರೈವೇಟ್ ಲಿಮಿಟೆಡ್ ಅನ್ನು ಎಂಜಿನಿಯರ್ ಮತ್ತು ಶಿಕ್ಷಕ ದಂಪತಿ ಬೈಜು ರವೀಂದ್ರನ್ ಮತ್ತು ಅವರ ಪತ್ನಿ ದಿವ್ಯಾ ಗೋಕುಲನಾಥ್ ಅವರು 2011 ರಲ್ಲಿ ಸ್ಥಾಪಿಸಿದರು. ಆರಂಭದಲ್ಲಿ, ಅವರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆನ್ಲೈನ್ ಕಲಿಕಾ ಕಾರ್ಯಕ್ರಮಗಳನ್ನು ನೀಡಿದ್ದರು. 2018 ರ ಹೊತ್ತಿಗೆ, ಬೈಜುಸ್ 1.5 ಕೋಟಿ ಬಳಕೆದಾರರನ್ನು ಹೊಂದಿದ್ದು, ಕಂಪನಿಯು ಸಣ್ಣ ನಗರಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಲಕ್ಷಾಂತರ ಮನೆಗಳನ್ನು ತಲುಪಿದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಶಾಲೆಗಳು ಮುಚ್ಚಲ್ಪಟ್ಟಾಗ ಮತ್ತು ಮಕ್ಕಳು ಡಿಜಿಟಲ್ ಶಿಕ್ಷಣದ ವಿಧಾನಕ್ಕೆ ಬದಲಾಗಬೇಕಾದಾಗ ಅಪ್ಲಿಕೇಶನ್ನ ಜನಪ್ರಿಯತೆಯು ಉತ್ತುಂಗಕ್ಕೆ ಏರಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಬೈಜುಸ್ ನಷ್ಟದ ಹಾದಿಯನ್ನು ಹಿಡಿದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.