ಅಹಮದಾಬಾದ್: ಗುಜರಾತಿನ ಅಹಮದಾಬಾದ್ನಲ್ಲಿ ನಡೆದ ಕ್ರಿಕೆಟ್ ವಿಶ್ವಕಪ್ 2023 ರ ಫೈನಲ್ನಲ್ಲಿ ಭಾರತೀಯ ತಂಡವು ಆಸ್ಟ್ರೇಲಿಯಾ ವಿರುದ್ಧ ಸೋತ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಕ್ರಿಕೆಟ್ ತಂಡದ ಡ್ರೆಸ್ಸಿಂಗ್ ರೂಮ್ಗೆ ಭೇಟಿ ನೀಡಿ ಆಟಗಾರರನ್ನು ಭೇಟಿಯಾಗಿದ್ದಾರೆ.
ಗೆಲ್ಲಲು 241 ರನ್ಗಳ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯ 6 ವಿಕೆಟ್ಗಳು ಮತ್ತು 7 ಓವರ್ಗಳು ಬಾಕಿ ಇರುವಂತೆಯೇ ಗುರಿ ತಲುಪಿ ವಿಶ್ವಕಪ್ ಅನ್ನು ತನ್ನದಾಗಿಸಿಕೊಂಡಿತ್ತು. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸೇರದಿಂತೆ ಎಲ್ಲಾ ಆಟಗಾರರು ಈ ಸಂದರ್ಭದಲ್ಲಿ ಕಣ್ಣೀರಿಟ್ಟರು. ಸೋಲಿನ ನಂತರ ಕ್ರಿಮೆಟ್ ಅಭಿಮಾನಿಗಳು ಕೂಡ ತುಂಬಾ ಭಾವುಕರಾಗಿ ಕಾಣುತ್ತಿದ್ದರು. ಸತತ ಹತ್ತು ಜಯಗಳ ಮೂಲಕ ಭಾರತ ಫೈನಲ್ಗೆ ಬಂದಿತ್ತು ಆದರೆ ಆಸ್ಟ್ರೇಲಿಯಾದ ಪ್ರಬಲ ಪ್ರದರ್ಶನದಿಂದ ಕಪ್ ಕೈ ಜಾರಿತು.
ಪ್ರಧಾನಿ ಮೋದಿ ಡ್ರೆಸ್ಸಿಂಗ್ ರೂಮ್ಗೆ ತೆರಳಿ ಆಟಗಾರರನ್ನು ಮಾತನಾಡಿಸಿ ಅವರಿಗೆ ಉತ್ತಮ ಪ್ರದರ್ಶನ ನೀಡಿದ್ದೀರಿ ಎಂದು ಹುರಿದುಂಬಿಸಿದ್ದಾರೆ. ಕ್ರಿಕೆಟಿಗ ರವೀಂದ್ರ ಜಡೇಜಾ ಅವರು ಈ ಬಗ್ಗೆ ಫೋಟೋ ಸಹಿತ ಟ್ವಿಟ್ ಮಾಡಿದ್ದಾರೆ. “ನಾವು ಉತ್ತಮ ಪಂದ್ಯಗಳನ್ನು ಆಡಿದ್ದೆವಯ ಆದರೆ ನಿನ್ನೆ ನಾವು ಸೋಲು ಕಂಡಿದ್ದೇವೆ. ನಾವೆಲ್ಲರೂ ಎದೆಗುಂದಿದ್ದೇವೆ ಆದರೆ ನಮ್ಮ ಜನರ ಬೆಂಬಲ ನಮ್ಮನ್ನು ಮುಂದುವರಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನಿನ್ನೆ ಡ್ರೆಸ್ಸಿಂಗ್ ರೂಮ್ಗೆ ಭೇಟಿ ನೀಡಿದ್ದು ವಿಶೇಷ ಮತ್ತು ಪ್ರೇರಕವಾಗಿತ್ತು” ಎಂದಿದ್ದಾರೆ.
We had a great tournament but we ended up short yesterday. We are all heartbroken but the support of our people is keeping us going. PM @narendramodi’s visit to the dressing room yesterday was special and very motivating. pic.twitter.com/q0la2X5wfU
— Ravindrasinh jadeja (@imjadeja) November 20, 2023
Unfortunately yesterday was not our day. I would like to thank all Indians for supporting our team and me throughout the tournament. Thankful to PM @narendramodi for specially coming to the dressing room and raising our spirits. We will bounce back! pic.twitter.com/Aev27mzni5
— 𝕸𝖔𝖍𝖆𝖒𝖒𝖆𝖉 𝖘𝖍𝖆𝖒𝖎 (@MdShami11) November 20, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.