ನವದೆಹಲಿ: ಕೇಂದ್ರದ ಪ್ರಮುಖ ಯೋಜನೆಗಳ ಬಗ್ಗೆ ನಾಗರಿಕರಿಗೆ ಮಾಹಿತಿ ನೀಡುವ ಮತ್ತು ಅಧಿಕಾರ ನೀಡುವ ಉದ್ದೇಶದಿಂದ ಆರಂಭಗೊಂಡಿರುವ ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆಯು ಸೋಮವಾರ ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಪಿರ್ ಪಂಜಾಲ್ ಕಣಿವೆಯ ಗುಡ್ಡಗಾಡು ಪ್ರದೇಶದ ಪಂಚಾಯತ್ಗಳನ್ನು ತಲುಪಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ನವೆಂಬರ್ 15 ರಂದು ಬುಧಾಲ್, ರಾಜೌರಿ ಗುರೇಜ್ ಮತ್ತು ಬಂಡಿಪೋರಾದಿಂದ ಯಾತ್ರೆಯನ್ನು ಆರಂಭಿಸಲಾಗಿದೆ. ಜನರು, ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ಸರ್ಕಾರಿ ಅಧಿಕಾರಿಗಳು ಯಾತ್ರೆಗಳಲ್ಲಿ ಭಾಗಿಯಾಗಿದ್ದರು.
ಕೇಂದ್ರದ ಯೋಜನೆಗಳ ಪ್ರಯೋಜನ ಎಲ್ಲರಿಗೂ ತಲುಪುತ್ತಿದೆ ಎಂದು ಸ್ಥಳೀಯರಾದ ಅಬ್ದುಲ್ ವಾಹಿದ್ ಮಲಿಕ್ ತಿಳಿಸಿದ್ದಾರೆ. “ಕೇಂದ್ರಗಳ ಯೋಜನೆಗಳ ಪ್ರಯೋಜನವು ಜನರನ್ನು ತಲುಪುತ್ತಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ, ಶೇಕಡಾ 90ರಷ್ಟು ಗೋಲ್ಡನ್ ಕಾರ್ಡ್ಗಳನ್ನು ಮಾಡಲಾಗಿದೆ. ಉಳಿದ ಕಾರ್ಡ್ಗಳನ್ನು ಮಾಡಲಾಗುತ್ತಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದಲ್ಲದೆ, ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧಿಕೃತ ಬಿಡುಗಡೆಯ ಪ್ರಕಾರ, ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆಯ ಮೊದಲ ದಿನವು ದೇಶದ 259 ಗ್ರಾಮ ಪಂಚಾಯತ್ಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ತಲುಪಿದೆ. ಜನರು ವಿಕ್ಷಿತ್ ಭಾರತ್ ಸಂಕಲ್ಪ್ ಅಡಿ ಆಯೋಜಿಸಲಾದ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದರು ಮತ್ತು ಸ್ಥಳದಲ್ಲೇ ಸೇವೆಗಳನ್ನು ಪಡೆದರು ಎಂದು ಪ್ರಕಟಣೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.