ನವದೆಹಲಿ: ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ವಿಶ್ವಕಪ್ 2023 ರ ಅಂತಿಮ ಪಂದ್ಯ ನಡೆಯಲಿದೆ. ಇದಕ್ಕಾಗಿ ಈಗಾಗಲೇ ದೇಶವ್ಯಾಪಿಯಾಗಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಭಾರತದ ಗೆಲುವಿಗಾಗಿ ಪೂಜೆ, ಪ್ರಾರ್ಥನೆಗಳು ನಡೆಯುತ್ತಿವೆ.
ಪ್ರಯಾಗರಾಜ್ನಲ್ಲಿ ತೃತೀಯ ಲಿಂಗಿ ಸಮುದಾಯದ ಸದಸ್ಯರು ಭಾರತ ತಂಡದ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಐದು ಬಾರಿ ವಿಶ್ವಕಪ್ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ‘ಮೆನ್ ಇನ್ ಬ್ಲೂ’ ತಂಡದ ಗೆಲುವಿಗಾಗಿ ಪೂಜೆಗಳನ್ನು ನಡೆಸಿದರು.
ಇನ್ನೊಂದೆಡೆ, ಮುಂಬೈನ ಮಾಧವಬಾಗ್ ದೇವಸ್ಥಾನದಲ್ಲಿ ‘ಹವನ’ ಕೂಡ ಆಯೋಜಿಸಲಾಗಿತ್ತು, ಅಲ್ಲಿ ಕೂಡ ಆಸೀಸ್ ವಿರುದ್ಧ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡದ ಗೆಲುವಿಗಾಗಿ ಕ್ರಿಕೆಟ್ ಅಭಿಮಾನಿಗಳು ಪ್ರಾರ್ಥಿಸಿದರು. ಅಭಿಮಾನಿಗಳು ಕೂಡ ಟೀಂ ಇಂಡಿಯಾದ ಜೆರ್ಸಿ ಹಾಕಿಕೊಂಡು ‘ಹವನʼದಲ್ಲಿ ಭಾಗಿಯಾದರು.
ಬುಧವಾರ ನ್ಯೂಜಿಲೆಂಡ್ ವಿರುದ್ಧ 70 ರನ್ಗಳ ಸಮಗ್ರ ಜಯ ದಾಖಲಿಸಿದ ಭಾರತ ಫೈನಲ್ಗೆ ಲಗ್ಗೆ ಇಟ್ಟಿದೆ.. ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಅವರ ಸ್ಫೋಟಕ ಆರಂಭದ ನಂತರ, ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ತಲಾ ಶತಕ ಬಾರಿಸಿ ಭಾರತವನ್ನು ಬೃಹತ್ ಗುರಿಯತ್ತ ಮುನ್ನಡೆಸಿದರು.
#WATCH | Uttar Pradesh: Members of the transgender community in Prayagraj performed a special prayer for Team India's victory in the World Cup final. pic.twitter.com/suXKbIVF2f
— ANI (@ANI) November 18, 2023
#WATCH | Mumbai: #INDvsAUS: Fans offer prayer for team India's victory in ICC Men’s Cricket World Cup finals
(Visuals from Madhavbaug Temple, Mumbai) https://t.co/xMXVU3rh96 pic.twitter.com/J19KxKQ90N
— ANI (@ANI) November 18, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.