ಕೊಲಂಬೋ: 1996 ರಲ್ಲಿ ಶ್ರೀಲಂಕಾದ ವಿಶ್ವಕಪ್ ಗೆಲುವಿಗೆ ಕಾರಣರಾದ ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಅರ್ಜುನ ರಣತುಂಗ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರ ಬಗ್ಗೆ ಮಾಡಿದ ಟೀಕೆಗಳ ಬಗ್ಗೆ ಶ್ರೀಲಂಕಾ ಸರ್ಕಾರವು ವಿಷಾದ ವ್ಯಕ್ತಪಡಿಸಿದೆ.
ಶ್ರೀಲಂಕಾ ಕ್ರಿಕೆಟ್ನಲ್ಲಿ ಜಯ್ ಶಾ ಮಧ್ಯಪ್ರವೇಶಿಸುತ್ತಿದ್ದಾರೆ ಎಂದು ರಣತುಂಗಾ ಮಾಡಿದ ಟೀಕೆಗಳ ಬಗ್ಗೆ ತೀವ್ರ ವಿಷಾದವಿದೆ ಎಂದು ಸರ್ಕಾರ ಹೇಳಿದೆ.
ಶ್ರೀಲಂಕಾ ಕ್ರಿಕೆಟ್ನ ಅವನತಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಅವರೇ ಕಾರಣ ಎಂದು ಅರ್ಜುನ ರಣತುಂಗ ಅವರು ವಿವಾದಾತ್ಮಕ ಹೇಳಿಕೆ ನೀಡಿದ ನಂತರ ಈ ಬೆಳವಣಿಗೆ ನಡೆದಿದೆ.
“ಶ್ರೀಲಂಕಾ ಕ್ರಿಕೆಟ್ ಕೌನ್ಸಿಲ್ (ಎಸ್ಎಲ್ಸಿ) ಅಧಿಕಾರಿಗಳು ಮತ್ತು ಜಯ್ ಶಾ ನಡುವಿನ ಸಂಪರ್ಕದಿಂದಾಗಿ ಬಿಸಿಸಿಐ ಎಸ್ಎಲ್ಸಿಯನ್ನು ತುಳಿಯಬಹುದು ಮತ್ತು ನಿಯಂತ್ರಿಸಬಹುದು. ಜಯ್ ಶಾ ಶ್ರೀಲಂಕಾ ಕ್ರಿಕೆಟ್ ಅನ್ನು ನಡೆಸುತ್ತಿದ್ದಾರೆ. ಜಯ್ ಶಾ ಅವರ ಒತ್ತಡದಿಂದಾಗಿ ಎಸ್ಎಲ್ಸಿ ಹಾಳಾಗುತ್ತಿದೆ. ಒಬ್ಬ ವ್ಯಕ್ತಿ ಭಾರತದಲ್ಲಿ ಶ್ರೀಲಂಕಾ ಕ್ರಿಕೆಟ್ ಅನ್ನು ಹಾಳುಮಾಡುತ್ತಿದ್ದಾರೆ, ಅವರು ಭಾರತದ ಗೃಹ ಸಚಿವರಾಗಿರುವ ಅವರ ತಂದೆಯಿಂದಾಗಿ ಮಾತ್ರ ಪ್ರಭಾವಿ ಎನಿಸಿಕೊಂಡಿದ್ದಾರೆ” ಎಂದು ರಣತುಂಗಾ ಹೇಳಿದ್ದಾರೆ.
ರಣತುಂಗಾ ಹೇಳಿಕೆಯ ಬಗ್ಗೆ ನಿನ್ನೆಯ ಸಂಸತ್ತಿನ ಅಧಿವೇಶನದಲ್ಲಿ ಸಚಿವರಾದ ಹರಿನ್ ಫರ್ನಾಂಡೋ ಮತ್ತು ಕಾಂಚನಾ ವಿಜೆಸ್ಕರ ಅವರು ವಿಷಾದ ವ್ಯಕ್ತಪಡಿಸಿದರು. ಎಸ್ಎಲ್ಸಿ ಜವಾಬ್ದಾರಿಯು ಶ್ರೀಲಂಕಾ ಆಡಳಿತದ್ದಾಗಿದೆಯೇ ಹೊರತು ಹೊರಗಿನವರದ್ದಲ್ಲ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.