ನವದೆಹಲಿ: ಮಿಜೋರಾಂ ಗಡಿಯಲ್ಲಿ ಮ್ಯಾನ್ಮಾರ್ ಸೇನೆ ಮತ್ತು ಪ್ರಜಾಪ್ರಭುತ್ವ ಪರ ಸೇನಾಪಡೆಗಳ ನಡುವಿನ ಹೋರಾಟದ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಉಭಯ ಪಕ್ಷಗಳ ನಡುವೆ ಶಾಂತಿಗಾಗಿ ಮನವಿ ಮಾಡಿದೆ.
“ನಾವು ಮ್ಯಾನ್ಮಾರ್ ಹಿಂಸಾಚಾರವನ್ನು ನಿಲ್ಲಿಸಲು ಮತ್ತು ರಚನಾತ್ಮಕ ಸಂಭಾಷಣೆಯ ಮೂಲಕ ಪರಿಸ್ಥಿತಿಯನ್ನು ಪರಿಹರಿಸಲು ಬಯಸುತ್ತೇವೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
“ಮ್ಯಾನ್ಮಾರ್ನಲ್ಲಿ ಶಾಂತಿ, ಸ್ಥಿರತೆ ಮತ್ತು ಪ್ರಜಾಪ್ರಭುತ್ವದ ಮರಳುವಿಕೆಗಾಗಿ ನಾವು ನಮ್ಮ ಕರೆಯನ್ನು ಪುನರುಚ್ಚರಿಸುತ್ತೇವೆ” ಎಂದಿದ್ದಾರೆ.
ಭಾರತದ ಮಿಜೋರಾಂನ ಅಂತರಾಷ್ಟ್ರೀಯ ಗಡಿಯ ಸಮೀಪದಲ್ಲಿರುವ ಪ್ರಮುಖ ಪಟ್ಟಣಗಳು, ಸೇನಾ ನೆಲೆಗಳು ಮತ್ತು ವ್ಯಾಪಾರ ಮಾರ್ಗಗಳನ್ನು ವಶಪಡಿಸಿಕೊಳ್ಳಲು ಪ್ರಜಾಪ್ರಭುತ್ವ ಪರ ಸೇನಾಪಡೆಗಳು ಪ್ರಯತ್ನಿಸಿದ ಹಿನ್ನೆಲೆಯಲ್ಲಿ ಭಾನುವಾರ ಪಡೆಗಳ ನಡುವೆ ಹೋರಾಟ ಪ್ರಾರಂಭವಾಗಿದ್ದು, ಅದು ಮಿಜೋರಾಂ ಗಡಿಯನ್ನೂ ತಲುಪಿದೆ.
ಫೆಬ್ರವರಿ 2021 ರಲ್ಲಿ ನಡೆದ ದಂಗೆಯ ನಂತರ ಮತ್ತೆ ಅಧಿಕಾರಕ್ಕೆ ಬಂದ ಜುಂಟಾ ಪಡೆಯ ವಿರುದ್ಧ ಮಿಲಿಟಿಯಾ ಪಡೆ ಹೋರಾಡುತ್ತಿದೆ. ದಂಗೆಯಿಂದಾಗಿ ಭಾರತಕ್ಕೆ ದೊಡ್ಡ ಮಟ್ಟದಲ್ಲಿ ಮ್ಯಾನ್ಮಾರ್ ನಿರಾಶ್ರಿತರು ಒಳನುಸುಳುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.