ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗೆ ಕೊಡುಗೆಗಳನ್ನು ನೀಡುತ್ತಿರುವ ದೇಶಗಳಿಗೆ ಅದರ ನಿರ್ಧಾರ ರೂಪಿಸುವ ಪ್ರಕ್ರಿಯೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸುವ ಅವಕಾಶವಿಲ್ಲದೇ ಇರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಬೇಸರ ವ್ಯಕ್ತಪಡಿಸಿದ್ದಾರೆ.
ನ್ಯೂಯಾರ್ಕ್ನಲ್ಲಿ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ನಿರೂಪಿಸಿದ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಶಾಂತಿಪಾಲನಾ ಸಮಿತ್ನ್ನು ಉದ್ದೇಶಿಸಿ ಅವರು ಮಾತನಾಡಿದರು.
ಭಾರತ ಶಾಂತಿಪಾಲನೆಯ ಪ್ರಯತ್ನಕ್ಕೆ ಕಟಿಬದ್ಧವಾಗಿದೆ ಎಂದ ಮೋದಿ, 850 ಸೈನಿಕರನ್ನು ಒಳಗೊಂಡ ಒಂದು ಹೆಚ್ಚುವರಿ ಬೆಟಾಲಿಯನನ್ನು , 3 ಪೊಲೀಸ್ ಯುನಿಟ್ಗಳನ್ನು ವಿಶ್ವಸಂಸ್ಥೆಯ ಶಾಂತಿಪಾಲನೆಗೆ ನೀಡುವುದಾಗಿ ಘೋಷಿಸಿದರು. ಅಲ್ಲದೇ ಇಂತಹ ಕಾರ್ಯಾಚರಣೆಗಳಲ್ಲಿ ಹೆಚ್ಚಿನ ಮಹಿಳಾ ಪ್ರತಿನಿಧಿಗಳು ಇರಲಿದ್ದಾರೆ ಎಂದರು.
‘ಶಾಂತಿ ಪಾಲನೆಯ ಯಶಸ್ಸು ಅಂತಿಮವಾಗಿ ಸೈನಿಕರು ಹೊತ್ತೊಯ್ಯುವ ಶಸ್ತ್ರಾಸ್ತ್ರಗಳ ಮೇಲೆ ಅವಲಂಭಿತವಾಗಿರುವುದಿಲ್ಲ, ಅದು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನೈತಿಕ ಶಕ್ತಿಯಲ್ಲಿ ಅವಲಂಭಿತವಾಗಿರುತ್ತದೆ ಎಂದರು.
ಅಲ್ಲದೇ ಶಾಂತಿ ಪಾಲನೆಗೆ ಅಪಾರ ಕೊಡುಗೆಗಳನ್ನು ನೀಡುತ್ತಿರುವ ರಾಷ್ಟ್ರಗಳಿಗೆ ಅದರ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಯಾವುದೇ ಪಾತ್ರವಿಲ್ಲದೇ ಇರುವುದರಿಂದ ಹೆಚ್ಚಿನ ಸಮಸ್ಯೆಗಳು ಉದ್ಭವವಾಗುತ್ತದೆ ಎಂದರು.
ವಿಶ್ವಸಂಸ್ಥೆಯ ಶಾಂತಿಪಾಲನೆಗೆ ಅತಿಹೆಚ್ಚು ಕೊಡುಗೆಗಳನ್ನು ಭಾರತ ನೀಡುತ್ತಿದೆ, 69 ಕಾರ್ಯಾಚರಣೆಗಳಲ್ಲಿ 48ಕ್ಕೆ ಇದುವರೆಗೆ ಅದು 18೦೦೦೦ ಸೈನಿಕರನ್ನು ನೀಡಿದೆ. ಅಲ್ಲದೇ ಭಾರತದ ೬೧ ಸೈನಿಕರು ಈ ವೇಳೆ ಬಲಿದಾನಗೈದಿದ್ದಾರೆ ಎಂದು ಅವರು ಸ್ಮರಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.