ಇಸ್ಲಾಮಾಬಾದ್: ಪಾಕಿಸ್ಥಾನದಲ್ಲಿ ಮತ್ತೊಬ್ಬ ಭಾರತ ವಿರೋಧಿ ಉಗ್ರನ ತಲೆ ಉರುಳಿದೆ. ಮೊಹಮ್ಮದ್ ಮುಜಾಮಿಲ್ ಮತ್ತು ಆತನ ಸಹಚರ ನಯೀಮುರ್ ರೆಹಮಾನ್ ಎಂದು ಗುರುತಿಸಲಾದ ಇಬ್ಬರು ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರನ್ನು ಅಪರಿಚಿತ ದುಷ್ಕರ್ಮಿಗಳು ಬುಧವಾರ ಗುಂಡಿಕ್ಕಿ ಕೊಂದಿದ್ದಾರೆ.
ಸಿಯಾಲ್ಕೋಟ್ನ ಪಸ್ರೂರ್ ತೆಹಸಿಲ್ನ ಖೋಖ್ರಾನ್ ಚೌಕ್ನಲ್ಲಿ ಗುಂಡಿನ ದಾಳಿ ನಡೆದಿದ್ದು, ಸ್ಥಳೀಯ ಜನರಲ್ಲಿ ಆತಂಕ ಮೂಡಿದೆ. ದಾಳಿಕೋರರು ಮತ್ತು ಅವರ ಗುರುತುಗಳು ನಿಗೂಢವಾಗಿದೆ. ಬಂಧನದಿಂದ ತಪ್ಪಿಸಿಕೊಂಡಿದ್ದಾರೆ.
ಇಬ್ಬರು ದುಷ್ಕರ್ಮಿಗಳು ಬೈಕ್ನಲ್ಲಿ ಬರುತ್ತಿರುವ, ನಂತರ ಅವರು ಮುಝಾಮಿಲ್ ಮತ್ತು ಆತನ ಸಹಾಯಕನ ಮೇಲೆ ಅನೇಕ ಗುಂಡುಗಳನ್ನು ಹಾರಿಸಿ ಅಲ್ಲಿಂದ ಪಲಾಯನ ಮಾಡುವ ದೃಶ್ಯಗಳ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಗುಂಡಿನ ದಾಳಿಯಲ್ಲಿ ಮುಝಾಮಿಲ್ನೊಂದಿಗೆ ಇದ್ದ ಮೂರನೇ ವ್ಯಕ್ತಿಗೂ ಗುಂಡು ತಗಲಿದೆ, ಆದರೆ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಈ ಉದ್ದೇಶಿತ ಹತ್ಯೆಯು ಲಷ್ಕರ್-ಎ-ತೊಯ್ಬಾದ ಉನ್ನತ ಶ್ರೇಣಿಯ ಕಮಾಂಡರ್ ಅಕ್ರಂ ಘಾಜಿಯ ಹತ್ಯೆಯ ತುಸುವೇ ದಿನದಲ್ಲಿ ನಡೆದಿದೆ. ಘಾಜಿ 2018 ರಿಂದ 2020 ರವರೆಗೆ ಭಯೋತ್ಪಾದಕ ಸಂಘಟನೆಗೆ ಉನ್ನತ ನೇಮಕಾತಿ ಮಾಡುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದ, ಕಾಶ್ಮೀರ ಕಣಿವೆಯೊಳಗೆ ನುಸುಳಲು ಉಗ್ರಗಾಮಿಗಳಿಗೆ ತರಬೇತಿ ನೀಡುತ್ತಿದ್ದ. ಅವರ ನಿಧನವು ಲಷ್ಕರ್-ಎ-ತೈಬಾದ ಕಾರ್ಯಾಚರಣೆಯ ಸಾಮರ್ಥ್ಯಗಳಿಗೆ ಭಾರೀ ಹಿನ್ನಡೆಯಾಗಿದೆ.
BIG BREAKING NEWS – Lashkar e Toiba cadre Md. Muzamil and his associate Naeemur Rahman shot dead by UNKNOWN MEN at Khokhran chowk, Sialkot , Pakistan 🔥🔥
A third one is critical. Pakistan Police said it was a land dispute case but unable to find UNKNOWN MEN ⚡ Other terrorists… pic.twitter.com/ULXWoOOXxv
— Narendra Maurya (@narendra483) November 14, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.